ಆರಂಭದಿಂದಲೂ ನಮ್ಮ ಸರ್ಕಾರವು ಅಲ್ಪಸಂಖ್ಯಾತರ ಬೇಡಿಕೆಗಳನ್ನು ಪರಿಗಣಿಸುತ್ತಲೇ ಇದೆ. ಆದರೆ, ಚಿನ್ಮಯಿ ದಾಸ್ ಅವರು ತಮ್ಮ ಹೇಳಿಕೆಗಳು ಹಾಗೂ ಭಾಷಣಗಳ ಮೂಲಕ ದೇಶದಲ್ಲಿ ಕೋಮು ಧ್ರುವೀಕರಣ ಮಾಡಲು ಯತ್ನಿಸಿದ್ದರು. ಚಿನ್ಮಯಿ ಬೆಂಬಲಿಗರಾದ ಹಿಂದೂ ಉಗ್ರರು ವಕೀಲ ಇಸ್ಲಾಂನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ಕಾನೂನು ಮೂಲಕವೇ ಗರಿಷ್ಠ ಶಿಕ್ಷೆ ಆಗುವಂತೆ ನಮ್ಮ ಸರ್ಕಾರವು ಮಾಡುತ್ತದೆ
- ನಹೀದ್ ಇಸ್ಲಾಂ, ತಾರತಮ್ಯ ವಿರೋಧಿ ಚಳವಳಿಯ ನಾಯಕ, ಮಧ್ಯಂತರ ಸರ್ಕಾರಕ್ಕೆ ಸಲಹೆಗಾರ (‘ಎಕ್ಸ್’ ಪೋಸ್ಟ್)
ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳ ಕುರಿತು ನಾವು ಮಾಡಿಕೊಂಡಿರುವ ಒಪ್ಪಂದ ಹಾಗೂ ಷರತ್ತುಗಳಿಗೆ ವ್ಯತಿರಿಕ್ತವಾಗಿ ನೀವು ಪ್ರತಿಕ್ರಿಯಿಸಿದ್ದೀರಿ. ನಮ್ಮ ನಡುವಿನ ಸ್ನೇಹ ಸಂಬಂಧಕ್ಕೂ ಈ ಹೇಳಿಕೆ ವ್ಯತಿರಿಕ್ತವಾಗಿದೆ. ‘ನಿರ್ದಿಷ್ಟ ಆರೋಪ’ದ ಮೇಲೆ ದಾಸ್ ಅವರನ್ನು ಬಂಧಿಸಲಾಗಿದೆ. ಅಲ್ಲಿಂದ ಈಚೆಗೆ ಕೆಲವು ಗುಂಪುಗಳು ಚಿನ್ಮಯಿ ಅವರ ವಿಚಾರವನ್ನು ತಿರುಚಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಹೇಳಿಕೆಯು ನಮಗೆ ಗಾಬರಿಯನ್ನೂ ತೀವ್ರ ನೋವನ್ನೂ ಉಂಟುಮಾಡಿದೆ
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಭಾರತದ ಹೇಳಿಕೆಗೆ ಪ್ರತಿಕ್ರಿಯೆ)