ಪ್ಯೂಬ್ಲಾ, ಮೆಕ್ಸಿಕೊ: ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಹಾಗೂ ಇತರ ಮಾಲಿನ್ಯಕಾರಕಗಳನ್ನು ಹೀರಿಕೊಂಡು ಗಾಳಿಯಲ್ಲಿ ಶುದ್ಧ ಆಮ್ಲಜನಕವನ್ನು ಬಿಡುವ ಕೃತಕ ಮರವನ್ನು ವಿನ್ಯಾಸಗೊಳಿಸುವ ಮೂಲಕ ಮೆಕ್ಸಿಕೊ ಮೂಲದ ಸ್ಟಾರ್ಟ್ಅಪ್ ಗಮನ ಸೆಳೆದಿದೆ.

ಬಯೋಮಿಟೆಕ್ ಎಂಬ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿದ್ದು, ಇದಕ್ಕೆ ’ಬಯೋ ಅರ್ಬನ್’ ಎಂದು ಹೆಸರಿಸಿದೆ. ಅಂದಾಜು 14 ಅಡಿ ಎತ್ತರ, 3 ಮೀ. ಸುತ್ತಳತೆ ಇರುವ ಈ ಕೃತಕ ಮರ, ಕಾಂಡವನ್ನು ಹೋಲುವ ರಚನೆ ಹೊಂದಿದ್ದು ಇದನ್ನು ಸ್ಟೀಲ್ನಿಂದ ತಯಾರಿಸಲಾಗಿದೆ. 368 ಮರಗಳು ಹೀರಿಕೊಳ್ಳುವ ಪ್ರಮಾಣದಷ್ಟೇ ಮಾಲಿನ್ಯಕಾರಕಗಳನ್ನು ಒಂದೇ ಕೃತಕ ಮರ ಹೀರಿಕೊಳ್ಳುತ್ತದೆ ಎಂದು ಸಂಸ್ಥೆ ಹೇಳಿದೆ.

‘ಮರವೊಂದರಲ್ಲಿ ನಡೆಯುವ ದ್ಯುತಿಸಂಶ್ಲೇಷಣೆ ಕ್ರಿಯೆಯು ತಂತ್ರಜ್ಞಾನದ ಮೂಲಕ ನಡೆಯುವಂತೆ ಈ ಕೃತಕ ಮರವನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಪಾಲುದಾರ ಜೇಮ್ ಫೆರರ್ ಹೇಳುತ್ತಾರೆ.

2016ರಲ್ಲಿ ಈ ಕೃತಕ ಮರವನ್ನು ವಿನ್ಯಾಸಗೊಳಿಸಲಾಗಿದೆ. ಸದ್ಯ ಪ್ಯೂಬ್ಲಾ, ಕೊಲಂಬಿಯಾ ಹಾಗೂ ಪನಾಮಾ ನಗರಗಳಲ್ಲಿ ತಲಾ ಒಂದು ಕೃತಕ ಮರ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.