ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನ ಗಲಿಲಿ ಸರೋವರವನ್ನು ಈಜಿದ ಮೊದಲ ಭಾರತೀಯ ಆರ್ಯನ್ ಸಿಂಗ್

Published 22 ಏಪ್ರಿಲ್ 2023, 3:42 IST
Last Updated 22 ಏಪ್ರಿಲ್ 2023, 3:42 IST
ಅಕ್ಷರ ಗಾತ್ರ

ಜೆರುಸಲೇಂ: ಭಾರತೀಯ ಈಜುಪಟು ಆರ್ಯನ್ ಸಿಂಗ್ ದಾಡಿಯಾಲ ಅವರು ಹವಾಮಾನ ವೈಪರೀತ್ಯದ ನಡುವೆಯೂ ಗಲಿಲಿ ಸರೋವರವನ್ನು ಈಜಿದ ಅತ್ಯಂತ ವೇಗದ ಈಜುಗಾರ ಎಂಬ ವಿಶ್ವ ದಾಖಲೆಯನ್ನು ಶುಕ್ರವಾರ ನಿರ್ಮಿಸಿದ್ದಾರೆ.

ಗಲಿಲಿ ಸರೋವರವು ಸಮುದ್ರ ಮಟ್ಟದಿಂದ ಸುಮಾರು 214 ಮೀಟರ್‌ಗಳಷ್ಟು ಕೆಳಗಿರುವ ಆಳದ ಸರೋವರ ಇದಾಗಿದೆ.ಈ ಸರೋವರವು ಸುಂಟರಗಾಳಿ ಮತ್ತು ಅನಿರ್ದಿಷ್ಟ  ಬಿರುಗಾಳಿಗಳಂತಹ ಅನೇಕ ಸವಾಲುಗಳನ್ನು ಈಜುಗಾರರಿಗೆ ಒಡ್ಡುತ್ತದೆ.

ಶುಕ್ರವಾರ ಬೆಳಿಗ್ಗೆ 5.18ಕ್ಕೆ ಗಲಿಲೀ ಸರೋವರವನ್ನು ಈಜಲು ಪ್ರಾರಂಭಿಸಿದ ದಾಡಿಯಾಲ ಅವರು 11:33ಕ್ಕೆ ಈಜನ್ನು ಪೂರ್ಣಗೊಳಿಸಿದರು. ಮೊದಲ ಪ್ರಯತ್ನದಲ್ಲಿಯೇ ಗಲಿಲಿ ಸರೋವರವನ್ನು ಈಜಿದ ವೇಗದ ಈಜುಗಾರ ಎಂಬ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

2022ರ ನವೆಂಬರ್‌ನಲ್ಲಿ ಗೋವಾದಲ್ಲಿ ತೆರೆದ ನೀರಿನ(ಓಪನ್‌ ವಾಟರ್‌) ಸಮುದ್ರವನ್ನು 5 ಗಂಟೆ 36 ನಿಮಿಷಗಳಲ್ಲಿ 32 ಕಿಮೀ ಈಜುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ದಾಡಿಯಾಲಾ, ಗಲಿಲೀ ಸಮುದ್ರವನ್ನು ಈಜಿದ ಮೊದಲ ಏಷ್ಯನ್ ಈಜುಗಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT