ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದುವರಿದ ಇಸ್ರೇಲ್–ಪ್ಯಾಲೆಸ್ಟೀನ್‌ ಕದನ

Published 12 ಮೇ 2024, 15:32 IST
Last Updated 12 ಮೇ 2024, 15:32 IST
ಅಕ್ಷರ ಗಾತ್ರ

ರಫಾ: ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನ್‌ ಬಂಡುಕೋರರ ನಡುವಿನ ಕದನ ಭಾನುವಾರವೂ ಮುಂದುವರಿಯಿತು.  

‘ಗಾಜಾ ಪಟ್ಟಿಯ ಉತ್ತರಭಾಗ ಮತ್ತು ಜಬಾಲಿಯ ನಿರಾಶ್ರಿತರ ಕೇಂದ್ರದ ಮೇಲೆ ಶನಿವಾರ ರಾತ್ರಿಯಿಡಿ ಇಸ್ರೇಲ್ ದಾಳಿ ನಡೆಸಿದ್ದು, ಅಪಾರ ಹಾನಿಯಾಗಿದೆ’ ಎಂದು ಪ್ಯಾಲೆಸ್ಟೀನ್‌‌ನಿಂದ ವರದಿಯಾಗಿದೆ. 

‘ನಿನ್ನೆಯ ರಾತ್ರಿ ಬಹಳ ಕಷ್ಟಕರವಾಗಿತ್ತು. ಶನಿವಾರ ಮಧ್ಯಾಹ್ನದಿಂದ ತೀವ್ರವಾದ ಬಾಂಬ್ ಸ್ಫೋಟದ ಶಬ್ದ ಕೇಳಿಸುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

‘ಸಹಾಯವನ್ನು ನಿರೀಕ್ಷಿಸಿ ಜನರಿಂದ ತುಂಬಾ ಕರೆಗಳು ಬರುತ್ತಿದ್ದು, ಎಲ್ಲರಿಗೆ ಪ್ರತಿಕ್ರಿಯಿಸ‌ಲು ಸಾಧ್ಯವಾಗುತ್ತಿಲ್ಲ’ ಎಂದು ಪ್ಯಾಲೆಸ್ಟೀನ್‌ ನಾಗರಿಕ ಸೇನೆ ತಿಳಿಸಿದೆ.

‘ರಫಾದಿಂದ ಈವರೆಗೆ ಮೂರು ಲಕ್ಷ ಜನ ವಲಸೆ ಹೋಗಿದ್ದಾರೆ. ಕರಾವಳಿ ಭಾಗದಲ್ಲಿರುವ 4,50,000 ಜನರು ತೀವ್ರ ಸಂಕಷ್ಟದಲ್ಲಿದ್ದಾರೆ’ ಎಂದು ವಿಶ್ವಸಂಸ್ಥೆಯಿಂದ ಪ್ಯಾಲೆಸ್ಟೀನ್‌ ನಿರಾಶ್ರಿತರ ನೆರವಿಗೆ ನಿಯೋಜನೆಯಾಗಿರುವ ಸಮಿತಿ ತಿಳಿಸಿದೆ.

ರಫಾದ ಮುಕ್ಕಾಲು ಭಾಗವನ್ನು ಇಸ್ರೇಲ್ ಆಕ್ರಮಿಸಿಕೊಂಡಿದ್ದು, ದಾಳಿ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT