ವಾಷಿಂಗ್ಟನ್: ಅಫ್ಗಾನಿಸ್ಥಾನದಲ್ಲಿ ಇನ್ನೂ ಉಳಿದಿರುವ ತನ್ನ ಸೇನಾಪಡೆಗಳನ್ನು ಅಮೆರಿಕ ಸೆಪ್ಟೆಂಬರ್ ಹೊತ್ತಿಗೆ ವಾಪಸ್ ಕರೆಸಿಕೊಂಡರೂ, ತಾಲಿಬಾನಿಗಳ ವಿರುದ್ಧ ವೈಮಾನಿಕ ದಾಳಿ ನಡೆಸುವ ಮೂಲಕ ಅಫ್ಗಾನ್ ರಕ್ಷಿಸುವುದಾಗಿ ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅಫ್ಗನ್‌ಲ್ಲಿರುವ ತನ್ನ ಸೇನಾಪಡೆಗಳನ್ನು ಸೆ.11 ರೊಳಗೆ ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ಗಡುವು ಹಾಕಿಕೊಂಡಿದೆ. ಈ ಗಡುವಿಗೆ ಮುನ್ನವೇ ಪ್ರಕ್ರಿಯೆಗಳು ಆರಂಭವಾಗಿದ್ದು, ಈ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಕೆಲಸಗಳೂ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಲ್ಲರ್ ಅವರು ಅಫ್ಗಾನಿಸ್ತಾನದಿಂದ ನಿರ್ಗಮಿಸಿದ ನಂತರ, ತಾಲಿಬಾನ್, ಅಲ್‌ಕೈದಾ ಮತ್ತಿತರ ಉಗ್ರಗಾಮಿ ಗುಂಪುಗಳ ವಿರುದ್ಧ ಅವರು ನಡೆಸುತ್ತಿದ್ದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಮಧ್ಯಪ್ರಾಚ್ಯ ರಾಷ್ಟ್ರಗಳ ವಿಭಾಗದ ಕಮಾಂಡರ್ ಜನರಲ್ ಫ್ರ್ಯಾಂಕ್ ಮೆಕೆಂಜಿ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಫ್ಗಾನಿಸ್ಥಾನದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಭದ್ರತಾ ವಿಭಾಗದ ಮುಖ್ಯಸ್ಥರಾಗಿರುವ ನೌಕಾಪಡೆ ಅಧಿಕಾರಿ ಪೀಟರ್ ವಸ್ಲೆ, ಸೇನೆಯನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಿಲ್ಲರ್ ಅವರಿಗೆ ನೆರವಾಗುತ್ತಿದ್ದಾರೆ ಎಂದು ಇವೇ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.