ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

Published 23 ಏಪ್ರಿಲ್ 2024, 6:05 IST
Last Updated 23 ಏಪ್ರಿಲ್ 2024, 6:05 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದೆ. ಬರ, ಪ್ರವಾಹ, ಚಂಡಮಾರುತದಿಂದಾಗಿ ಅತಿ ಹೆಚ್ಚಿನ ಸಾವು-ನೋವು ಉಂಟಾಗಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ವರದಿಯ ಪ್ರಕಾರ, ವಾಯುವ್ಯ ಪೆಸಿಫಿಕ್ ಸಾಗರದಲ್ಲಿ ಸಮುದ್ರ-ಮೇಲ್ಮೈ ತಾಪಮಾನ ಗರಿಷ್ಠ ಮಟ್ಟವನ್ನು ತಲುಪಿದೆ. ಆರ್ಕಟಿಕ್ ಮಹಾಸಾಗರದಲ್ಲಿ ಅತಿಯಾದ ಉಷ್ಣಮಾರುತದ ಅನುಭವ ಉಂಟಾಗಿದೆ.

2023ರಲ್ಲಿ ಈ ಪ್ರದೇಶದ ಅನೇಕ ದೇಶಗಳಲ್ಲಿ ಅತಿಯಾದ ತಾಪಮಾನ ದಾಖಲಾಗಿದೆ. ಪ್ರವಾಹ, ಚಂಡಮಾರುತ, ಉಷ್ಣಗಾಳಿ, ಬರಗಾಲ ಸೇರಿದಂತೆ ವಿಪರೀತ ವಿಪತ್ತು ಎದುರಿಸಿದೆ. ಈ ಹವಾಮಾನ ಬದಲಾವಣೆಯು ಮಾನವನ ಜೀವನ, ಸಮಾಜ, ಆರ್ಥಿಕ ಹಾಗೂ ಪರಿಸರದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಡಬ್ಲ್ಯುಎಂಒ ಮಹಾ ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸಾಲೊ ಹೇಳಿದ್ದಾರೆ.

ಭಾರತದಲ್ಲಿ ಏಪ್ರಿಲ್ ಹಾಗೂ ಜೂನ್‌ನಲ್ಲಿ ಶಾಖಾಘಾತದಿಂದ 110 ಮಂದಿ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT