ಬಾಲ್ಟಿಮೋರ್, ಅಮೆರಿಕ: ಸರಕು ಸಾಗಣೆ ಹಡಗು ಡಿಕ್ಕಿಯಾಗಿ ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆ ಕುಸಿದಿದ್ದ ಸಂದರ್ಭದಲ್ಲಿ ಪಟಾಪ್ಸ್ಕೊ ನದಿಗೆ ಬಿದ್ದಿದ್ದ ನಾಲ್ವರ ಪತ್ತೆಗೆ ಶೋಧ ಮುಂದುವರಿದಿದೆ. ಈ ನಾಲ್ವರು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ನದಿಗೆ ಬಿದ್ದಿದ್ದ 2.6 ಕಿ.ಮೀ ಉದ್ದದ ಸೇತುವೆಯ ಅವಶೇಷಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬೃಹತ್ ಅವಶೇಷ ತೆರವು ಸವಾಲಿನ ಕೆಲಸವಾಗಿದೆ ಎಂದು ಅಮೆರಿಕ ಕಡಲು ಕಾವಲು ಪಡೆಯ ಶಾನೋನ್ ಗಿಲ್‌ರೀತ್ ಶುಕ್ರವಾರ ತಿಳಿಸಿದ್ದಾರೆ.

ಸುಮಾರು 1 ಸಾವಿರ ಟನ್ ಭಾರ ಎತ್ತುವ ಸಾಮರ್ಥ್ಯದ ಬೃಹತ್ ಕ್ರೇನ್ ಸೇರಿದಂತೆ ಏಳು ಕ್ರೇನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 10 ರಕ್ಷಣಾ ದೋಣಿಗಳು, ಒಂಭತ್ತು ಬಾರ್ಜ್‌ಗಳು, ಕರಾವಳಿ ಕಾವಲು ಪಡೆಯ ಐದು ದೋಣೀಗಳನ್ನು ತೆರವು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ನದಿಗೆ ಕುಸಿದು ಬಿದ್ದಿರುವ ಸೇತುವೆ ಅವಶೇಷವು ಸುಮಾರು 4,000 ಟನ್ ತೂಕದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.