ಕಾಬೂಲ್: ಅಫ್ಘಾನಿಸ್ತಾನದ ಎರಡು ನಗರಗಳಲ್ಲಿ ಬಾಂಬ್ ಸ್ಫೋಟವಾಗಿದ್ದು, ಮಜರ್–ಐ–ಷರೀಫ್ ಮಸೀದಿಯಲ್ಲಿದ್ದ 12 ಜನ ಸೇರಿದಂತೆ ಕನಿಷ್ಠ 16 ಜನ ಸಾವನ್ನಪ್ಪಿದ್ದಾರೆ ಎಂದು ಉಗ್ರರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಹೇಳಿದೆ.

‘ಮಸೀದಿಯಲ್ಲಿ ಬಾಂಬ್‌ಗಳನ್ನು ಇರಿಸುವಲ್ಲಿ ಯಶಸ್ವಿಯಾದೆವು. ನಂತರ ಮಸೀದಿಯು ಜನರಿಂದ ತುಂಬಿದ ಬಳಿಕ ಬಾಂಬ್‌ನ್ನು ಸಿಡಸಲಾಯಿತು‘ ಎಂದು ಐಎಸ್ ಹೇಳಿದೆ.

ದಾಳಿಗೆ ತುತ್ತಾದವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂತ್ರಸ್ತರ ಚಿತ್ರಗಳನ್ನು ಸೇಹ್ ಡೋಕಾನ್‌ನಮಜರ್–ಇ–ಷರೀಫ್ ಮಸೀದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕುಂದುಜ್ ಎಂಬಲ್ಲಿ ಮತ್ತೊಂದು ಬೈಸಿಕಲ್ ಬಾಂಬ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟಿದ್ದಾರೆ ಹಾಗೂ 18 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಒಬೈದುಲ್ಲಾ ಅಬೇದಿ ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಾಂಬ್ ದಾಳಿಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದ್ದರೂ, ಸುನ್ನಿ ಪಂಗಡದ ಇಸ್ಲಾಮಿಕ್ ಸ್ಟೇಟ್ ಗುಂಪು ಆಗಾಗ ಶಿಯಾಗಳ ವಿರುದ್ಧ ದಾಳಿ ಮಾಡುತ್ತಿದೆ.

ಗಾಯಾಳುಗಳ ಬಗ್ಗೆ ಮಾಹಿತಿ ನೀಡಿದ ವೈದ್ಯ ಅಹ್ಮದ್ ಜಿಯಾ ಜಿಂದಾನಿ, ‘ಈ ದಾಳಿಗಳಲ್ಲಿ 16 ಸಾವುಗಳಾಗಿದ್ದು, 58 ಜನ ಗಾಯಾಳುಗಳಿದ್ದಾರೆ. ಅಲ್ಲದೇ ಈ ಗಾಯಾಳುಗಳಲ್ಲಿ 32 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.