ಇಸ್ತಾನ್ಬುಲ್: ಅಮೆರಿಕ ನಡೆಸಿದ ದಾಳಿಯಲ್ಲಿ ಹತನಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಸ್ಥಾಪಕ ಅಬುಬಕರ್ ಅಲ್ ಬಗ್ದಾದಿಯ ಪತ್ನಿಯನ್ನು ಕಳೆದ ವರ್ಷ ಬಂಧಿಸಿದ್ದು, ಐಎಸ್ನ ಆಂತರಿಕ ಕಾರ್ಯಾಚರಣೆ ಬಗ್ಗೆ ಬಹಳಷ್ಟು ರಹಸ್ಯವಾದ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗ್ದಾದಿಯ ಮೊದಲನೇ ಪತ್ನೆ ಎಂದು ಹೇಳಿಕೊಂಡಿರುವ ಈಕೆ, ತನ್ನನ್ನು ರಾನಿಯಾ ಮಹಮೂದ್ ಎಂದು ಗುರುತಿಸಿಕೊಂಡಿದ್ದಾಳೆ. ಆದರೆ, ವಾಸ್ತವವಾಗಿ ಅಸ್ಮಾ ಫೌಜಿ ಮುಹಮ್ಮದ್ ಅಲ್ ಕ್ಯೂಬಯ್ಸಿ ಈಕೆಯ ಮೂಲ ಹೆಸರು ಎಂದು ಅವರು ಹೇಳಿದ್ದಾರೆ.

2018ರ ಜೂನ್ 2 ರಂದು ಸಿರಿಯಾ ಗಡಿಯಯಲ್ಲಿ ಈಕೆಯನ್ನು ಬಂಧಿಸಲಾಗಿದೆ. ಬಗ್ದಾದಿಯ ಪುತ್ರಿಯನ್ನು ಸಹ ಬಂಧಿಸಲಾಗಿದ್ದು, ಅವಳು ತನ್ನನ್ನು ಲೈಲಾ ಜಬೀರ್ ಎಂದು ಗುರುತಿಸಿಕೊಂಡಿದ್ದಾಳೆ. ಬಗ್ದಾದಿಯ ಡಿಎನ್ಎ ಮಾದರಿ ಪರಿಶೀಲನೆಯಿಂದ ಬಂಧಿತರೊಂದಿಗಿನ ಸಂಬಂಧ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

‘ಐಎಸ್ ಆಂತರಿಕ ಕಾರ್ಯಾಚರಣೆ ಹಾಗೂ ಬಗ್ದಾದಿಯ ಬಗ್ಗೆ ಈತನ ಪತ್ನಿಯು ಸ್ವಯಂ ಪ್ರೇರಿತಳಾಗಿ ಬಹಳಷ್ಟು ಮಾಹಿತಿ ನೀಡಿದ್ದಾಳೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈಗಾಗಲೇ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಹೊಸ ಮಾಹಿತಿ ಸಿಕ್ಕಿದ್ದರಿಂದ ಬೇರೆ ಕಡೆಗಳಲ್ಲಿ ಉಗ್ರರನ್ನು ಬಂಧಿಸಲು ಸಾಧ್ಯವಾಯಿತು. ವರ್ಷದ ಹಿಂದೆಯೇ ಬಗ್ದಾದಿ ಪತ್ನಿಯನ್ನು ಬಂಧಿಸಿದ್ದರೂ ಈಗ ಮಾಹಿತಿ ಬಹಿರಂಗಪಡಿಸಿದ್ದೇವೆ’ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.