ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಅಮೆರಿಕದಲ್ಲಿರುವ ಬಲೂಚ್, ಸಿಂಧಿ ಮತ್ತು ಅಫ್ಗಾನ್ ಸಮುದಾಯದ ಸದಸ್ಯರು ಸೇರಿದಂತೆ ಹಲವು ವಲಸಿಗರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಅಮೆರಿಕದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಬಾಂಗ್ಲಾದೇಶ ಮತ್ತು ಗಿಲ್ಗಿಟ್– ಬಾಲ್ಟಿಸ್ತಾನ ಪ್ರದೇಶದ ವಲಸೆ ಕಾರ್ಮಿಕರು ಕೂಡ ಭಾಗವಹಿಸಿದ್ದರು.

‘ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಗುತ್ತಿದೆ. ಅಂತರರಾಷ್ಟ್ರೀಯ ಸಮುದಾಯ ಮತ್ತು ಅಮೆರಿಕ ಪಾಕಿಸ್ತಾನದ ಮೇಲೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸುತ್ತೇವೆ’ ಎಂದು ಬಲೂಚ್ ರಾಷ್ಟ್ರೀಯ ಆಂದೋಲನದ ಸದಸ್ಯ ನಬಿ ಬಕ್ಷಾ ಬಲೂಚ್ ತಿಳಿಸಿದ್ದಾರೆ.

ಈ ಪ್ರತಿಭಟನೆಯನ್ನು ‘ಎಕ್ಸ್‌ಪೋಸ್–ಪಾಕಿಸ್ತಾನ್’ ಅಭಿಯಾನ ಸಮಿತಿಯು ಆಯೋಜಿಸಿದ್ದು, ಪ್ರತಿಭಟನಕಾರರು ಕಾರು ರ‍್ಯಾಲಿ ಮೂಲಕ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಆಗಮಿಸಿದರು.

ಆಗಸ್ಟ್ 14, ಆಜಾದಿಯ (ಸ್ವಾತಂತ್ರ್ಯ) ದಿನವಲ್ಲ, ಇದು ಪಾಕಿಸ್ತಾನವು ಬಲೂಚಿಸ್ತಾನ ಮತ್ತು ಗಿಲ್ಗಿಟ್– ಬಾಲ್ಟಿಸ್ತಾನವನ್ನು ಬಲವಂತವಾಗಿ ಆಕ್ರಮಣ ಮಾಡಿಕೊಂಡ ದಿನವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ವಿಶ್ವಸಂಸ್ಥೆಯ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯಲ್ಲಿರುವ ತಾಲಿಬಾನ್‌ಗೆ ಪಾಕಿಸ್ತಾನ ಬಹಿರಂಗವಾಗಿ ಆರ್ಥಿಕ ನೆರವು ಒದಗಿಸುತ್ತಿದೆ. ಇದು ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯಗಳ ನಿಯಮಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳ ಮಾರಾಟವನ್ನು ನಿಷೇಧಿಸಬೇಕು. ಜತೆಗೆ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ಯು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.