ಢಾಕಾ: ಬಾಂಗ್ಲಾದೇಶದಲ್ಲಿ ಧರ್ಮಾಧಾರಿತ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಧರ್ಮ ನಿಂದನೆ ಮಾಡಿದ ಆರೋಪದಲ್ಲಿ ಬೆಂಕಿ ಹಚ್ಚಿ ಹಿಂದೂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾದ ಘಟನೆಯು ಬೆಳಕಿಗೆ ಬಂದಿದೆ.

ಮೃತನನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದೆ ಎಂದು ಬಾಂಗ್ಲಾ ಟ್ರಿಬೂನ್ ವರದಿ ಮಾಡಿದೆ.

ಧರ್ಮ ನಿಂದನೆ ಮಾಡಿದ ಆರೋಪದ ಮೇಲೆ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಕಾರ್ಖಾನೆಯ ಆವರಣದಲ್ಲಿ ಮರಕ್ಕೆ ಕಟ್ಟಿ ಗುರುವಾರ ರಾತ್ರಿ ಥಳಿಸಿದೆ. ನಂತರ ಹೆದ್ದಾರಿಯ ಬಳಿ ಅವರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಬಾಂಗ್ಲಾ ಸರ್ಕಾರ ‘ಧರ್ಮದ ಹೆಸರಿನಲ್ಲಿ ಅಮಾಯಕ ನಾಗರಿಕನನ್ನು ಕೊಂದಿರುವ ಘಟನೆಯು ಅಮಾನವೀಯ. ಹೊಸ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ರೀತಿಯ ಕೆಲಸವನ್ನು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಘಟನೆಯ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
.ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟವರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ.ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.