ಢಾಕಾ: ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾ ನಟಿ ಮೆಹರ್ ಅಫ್ರೋಜ್ ಶಾನ್ ಅವರನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ 'ಇಂಡಿಯಾ ಟುಡೇ' ವರದಿ ಮಾಡಿವೆ.

ಗುರುವಾರ ರಾತ್ರಿ ಧನ್ಮೊಂಡಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರೆಜೌಲ್ ಕರೀಮ್ ಮಲ್ಲಿಕ್ 'ಢಾಕಾ ಟ್ರಿಬ್ಯೂನ್'ಗೆ ತಿಳಿಸಿದ್ದಾರೆ.

ಮೆಹರ್ ಅವರು ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಟೀಕಿಸುತ್ತಿದ್ದರು. ಇವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮೇಲೆ ದಾಳಿ

ಮೆಹರ್ ಬಂಧನಕ್ಕೂ ಮುನ್ನ ಅವರ ಕುಟುಂಬದವರು ವಾಸವಾಗಿದ್ದ ಜಮಾಲ್ಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಜಮಾಲ್ಪುರದ ನೊರುಂಡಿ ರೈಲ್ವೆ ನಿಲ್ದಾಣದ ಬಳಿ ಇರುವ ಅವರ ನಿವಾಸಕ್ಕೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಈ ಮನೆ ಮೆಹರ್ ಅವರ ತಂದೆ ಎಂಜಿನಿಯರ್ ಮೊಹಮ್ಮದ್ ಅಲಿ ಅವರಿಗೆ ಸೇರಿದ್ದಾಗಿದೆ.
.ಢಾಕಾ: ಶೇಖ್ ಹಸೀನಾ ತಂದೆ ನಿವಾಸ ಧ್ವಂಸಕ್ಕೆ ಯತ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.