ಬೀಜಿಂಗ್/ಢಾಕಾ: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಶುಕ್ರವಾರ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ. ಮಾತುಕತೆಯ ವಿವರಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.

ನಾಲ್ಕು ದಿನಗಳ ಚೀನಾ ಭೇಟಿಯಲ್ಲಿರುವ ಯೂನಸ್ ಹೈನಾನ್ನಲ್ಲಿ ನಡೆದ ದೇಶದ ಬೋವೊ ಫೋರಂ ಫಾರ್ ಏಷ್ಯಾ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಿದಕ್ಕೂ ಮುನ್ನ, ಗುರುವಾರ ಬೀಜಿಂಗ್ಗೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಚೀನಾದ ಉಪ ವಿದೇಶಾಂಗ ಸಚಿವ ಸನ್ ವೀಡಾಂಗ್ ಬರಮಾಡಿಕೊಂಡರು.

ಷಿ ಜೊತೆಗಿನ ಸಭೆಗೂ ಮುನ್ನ ಯೂನಸ್, ಗುರುವಾರ ಚೀನಾ ನೀಡಿರುವ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ಮತ್ತು ಚೀನಾ-ಅನುದಾನಿತ ಯೋಜನೆಗಳ ಮೇಲಿನ ಬದ್ಧತೆ ಶುಲ್ಕವನ್ನು ಮನ್ನಾ ಮಾಡಲು ಕರೆ ನೀಡಿದರು.

ಬೋವೊ ಫೋರಂ ಫಾರ್ ಏಷ್ಯಾ ವಾರ್ಷಿಕ ಸಮ್ಮೇಳನದ ಹೊರತಾಗಿ ಚೀನಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಿಂಗ್ ಕ್ಸುಯೆಕ್ಸಿಯಾಂಗ್ ಅವರೊಂದಿಗಿನ ಸಭೆಯಲ್ಲಿ ಯೂನಸ್, ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಚೀನಾದ ಬೆಂಬಲವನ್ನು ಕೋರಿದರು ಎಂದು ಬಾಂಗ್ಲಾದೇಶ ಮಾಧ್ಯಮ ವರದಿಗಳು ತಿಳಿಸಿವೆ.

ಬಾಂಗ್ಲಾದೇಶಕ್ಕೆ ಚೀನಾ ನೀಡುವ ಸಾಲಗಳ ಬಡ್ಡಿದರಗಳನ್ನು ಶೇ 3ರಿಂದ ಶೇ 1-2ಕ್ಕೆ ಇಳಿಸುವಂತೆ ಅವರು ಕರೆ ನೀಡಿದರು. ಬಾಂಗ್ಲಾದೇಶದಲ್ಲಿ ಚೀನಾದ ಅನುದಾನಿತ ಯೋಜನೆಗಳ ಮೇಲಿನ ಶುಲ್ಕವನ್ನು ಮನ್ನಾ ಮಾಡಬೇಕೆಂದು ಕೋರಿದರು.

ಜಪಾನ್, ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಂತರ ಚೀನಾ ಬಾಂಗ್ಲಾದೇಶದ ನಾಲ್ಕನೇ ಅತಿದೊಡ್ಡ ಸಾಲದಾತ ದೇಶವಾಗಿದ್ದು, 1975ರಿಂದ ಈವರೆಗೆ ನೀಡಲಾದ ಒಟ್ಟು ಸಾಲ 7.5 ಬಿಲಿಯನ್ ಅಮೆರಿಕನ್ ಡಾಲರ್ಗಳಾಗಿವೆ ಎಂದು ಬಾಂಗ್ಲಾದೇಶದ ಡೈಲಿ ಸ್ಟಾರ್ ಪತ್ರಿಕೆಯ ವರದಿಯೊಂದು ತಿಳಿಸಿದೆ.

ಡಿಂಗ್ ಅವರೊಂದಿಗಿನ ಸಭೆಯಲ್ಲಿ, ಸಿದ್ಧ ಉಡುಪುಗಳು, ವಿದ್ಯುತ್ ವಾಹನಗಳು, ಲಘು ಯಂತ್ರೋಪಕರಣಗಳು, ಹೈಟೆಕ್ ಎಲೆಕ್ಟ್ರಾನಿಕ್ಸ್, ಚಿಪ್ ತಯಾರಿಕೆ ಮತ್ತು ಸೌರ ಫಲಕ ಉದ್ಯಮ ಸೇರಿದಂತೆ ಚೀನಾದ ಉತ್ಪಾದನಾ ಕೈಗಾರಿಕೆಗಳ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಯೂನಸ್ ಬೀಜಿಂಗ್ನ ಸಹಾಯವನ್ನು ಕೋರಿದರು.

ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಿ ಓವರ್ಚುಕ್ ಅವರನ್ನೂ ಯೂನಸ್ ಭೇಟಿಯಾದರು. ಬಾಂಗ್ಲಾದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ರಸಗೊಬ್ಬರ ರಫ್ತು ಮಾಡುವಲ್ಲಿ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

ಬೋವೊ ಫೋರಂನ ಅಧ್ಯಕ್ಷರಾಗಿರುವ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರನ್ನು ಯೂನಸ್ ಭೇಟಿಯಾಗಿ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದತ್ತ ಸುಗಮ ಪರಿವರ್ತನೆಗಾಗಿ ಬೆಂಬಲ ಮತ್ತು ಸಲಹೆಯನ್ನು ಕೋರಿದರು.

ನಾವು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇವೆ. ನಮಗೆ ನಿಮ್ಮ ಬೆಂಬಲ ಮತ್ತು ಸಲಹೆ ಬೇಕು. ನಮಗೆ ಈಗ ಉತ್ತಮ ಅವಕಾಶವಿದೆ ಎಂದು ಯೂನಸ್ ಹೇಳಿದ್ದಾಗಿ ದಿನಪತ್ರಿಕೆ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.