ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾನ್ ಚುನಾವಣೆ: 30 ಸ್ಥಾನ ಗೆದ್ದ ಪಿಡಿಪಿ ಸರ್ಕಾರ ರಚನೆಗೆ ಸಿದ್ಧ

Published 9 ಜನವರಿ 2024, 20:57 IST
Last Updated 9 ಜನವರಿ 2024, 20:57 IST
ಅಕ್ಷರ ಗಾತ್ರ

ಥಿಂಫು: ಭೂತಾನ್‌ನ ಸಂಸತ್ತಿಗೆ ಮಂಗಳವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 30 ಸ್ಥಾನಗಳನ್ನು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಗೆದ್ದುಗೊಂಡಿದ್ದು, ಸರ್ಕಾರ ರಚನೆಗೆ ಸಿದ್ಧವಾಗಿದೆ.

ಭೂತಾನ್‌ ಪ್ರಸಾರ ಸೇವೆಯ ಮಾಹಿತಿಗಳ ಪ್ರಕಾರ, ಸಂಸತ್ತಿನ ಒಟ್ಟು ಸದಸ್ಯ ಬಲ 47 ಸ್ಥಾನಗಳು. ಪಿಡಿಪಿ 30 ಸ್ಥಾನ ಗೆದ್ದುಕೊಂಡರೆ, ಕಣದಲ್ಲಿದ್ದ ಮತ್ತೊಂದು ಪಕ್ಷ ಭೂತಾನ್ ಟೆಂಡ್ರೆಲ್‌ ಪಾರ್ಟಿ 17 ಸ್ಥಾನ ಗೆದ್ದುಕೊಂಡಿತು. 

ನೂತನ ಸರ್ಕಾರವು ದೇಶವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ಭರವಸೆಗಳನ್ನು ಈಡೇರಿಸಲಿದ್ದಾರೆ ಎಂಬ ವಿಶ್ವಾಸವನ್ನು ಜನತೆ ಹೊಂದಿದ್ದಾರೆ. 

ಇದು, ದೇಶದಲ್ಲಿ ನಡೆದ ನಾಲ್ಕನೇ ಸಾರ್ವತ್ರಿಕ ಚುನಾವಣೆಯಾಗಿದೆ. ಚುನಾವಣೆಯ ಅಂತಿಮ ಫಲಿತಾಂಶವನ್ನು ಭೂತಾನ್‌ ಚುನಾವಣಾ ಆಯೋಗವು ಬುಧವಾರ ಪ್ರಕಟಿಸಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT