ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ, ಇರಾಕ್‌ಗೆ 150 ಮಿಲಿಯನ್ ಡಾಲರ್ ನೆರವು: ಬ್ಲಿಂಕನ್ ಘೋಷಣೆ

Published 8 ಜೂನ್ 2023, 13:50 IST
Last Updated 8 ಜೂನ್ 2023, 13:50 IST
ಅಕ್ಷರ ಗಾತ್ರ

ದುಬೈ : ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿ ಹಿಡಿತದಿಂದ ವಿಮೋಚನೆಗೊಂಡ ಸಿರಿಯಾ ಮತ್ತು ಇರಾಕ್‌ಗೆ 150 ಮಿಲಿಯನ್ ಡಾಲರ್ (ಅಂದಾಜು ₹1,230 ಕೋಟಿ) ನೆರವನ್ನು ಅಮೆರಿಕ ನೀಡಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಗುರುವಾರ ತಿಳಿಸಿದ್ದಾರೆ.

ಸೌದಿ ಅರೇಬಿಯಾ ಆಯೋಜಿಸಿದ್ದ ಸಚಿವ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಉಗ್ರಗಾಮಿ ಗುಂಪುಗಳು ಇನ್ನು ಮುಂದೆ ಯಾವುದೇ ಪ್ರದೇಶವನ್ನು ನಿಯಂತ್ರಿಸುವುದಿಲ್ಲ, ಆದರೆ ಅವರ ಅಂಗಸಂಸ್ಥೆಗಳು ಇನ್ನೂ ಆಫ್ರಿಕಾ, ಏಷ್ಯಾ ಮತ್ತು ಮಧ್ಯಪ್ರಾಂತ್ಯದಲ್ಲಿ ದಾಳಿ ನಡೆಸುತ್ತಿವೆ. ಈ ಗುಂಪಿನ ವಿರುದ್ಧ ಹೋರಾಡಲು ಅಮೆರಿಕ ಪ್ರತಿಜ್ಞೆ ಮಾಡಿದ್ದು, ಅದಕ್ಕಾಗಿ 600 ಮಿಲಿಯನ್ ಡಾಲರ್‌ಗಿಂತಲೂ (ಅಂದಾಜು ₹ 4,950 ಕೋಟಿ) ಹೆಚ್ಚಿನ ನಿಧಿಯನ್ನು ನೀಡಲಿದೆ’ ಎಂದರು.

ಐಎಸ್‌ಐಎಸ್‌ ಅನ್ನು ಸೋಲಿಸಲು ಮತ್ತು ಉಗ್ರಗಾಮಿ ಗುಂಪಿನ ವಿರುದ್ಧ ಸಂಘಟಿತ ಹೋರಾಟ ನಡೆಸಲು 80ಕ್ಕೂ ಹೆಚ್ಚು ದೇಶಗಳು ಹಾಗೂ ದೇಶಗಳ ಒಕ್ಕೂಟವು ಸಂಘಟಿತವಾಗಿವೆ ಎಂದರು.

ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಭಾಗವಾಗಿ ಬ್ಲಿಂಕೆನ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹಾಗೂ ಸೌದಿ ಅಧಿಕಾರಿಗಳನ್ನು ಭೇಟಿ ಮಾಡಿದರು. ಅಲ್ಲದೇ ಗಲ್ಫ್‌ ವಿದೇಶಾಂಗ ಸಚಿವರ ಸಭೆಯಲ್ಲೂ ಭಾಗವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT