ದಿಯಾರ್‌ಬಕಿರ್(ಟರ್ಕಿ): ವಾಕರಿಕೆ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನ ಹೊಟ್ಟೆಯಿಂದ ವೈದ್ಯಕೀಯ ಸಿಬ್ಬಂದಿ 3 ಅಡಿ ಉದ್ದದ ಚಾರ್ಜಿಂಗ್ ಕೇಬಲ್ ಅನ್ನು ಹೊರತೆಗೆದಿದ್ದಾರೆ ಎಂದು ಮಿರರ್ ವರದಿ ಮಾಡಿದೆ..

ಆಗ್ನೇಯ ಟರ್ಕಿಯ ದಿಯಾರ್‌ಬಕಿರ್‌ನ ಕುಟುಂಬವೊಂದು 15 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿತ್ತು. ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದಾಗ ಹೊಟ್ಟೆಯಲ್ಲಿ ಸುರುಳಿಯಾಗಿ ಸುತ್ತಿಕೊಂಡಿರುವ ಯಾವುದೋ ವಸ್ತು ಇರುವುದನ್ನು ಪತ್ತೆ ಮಾಡಿದ್ದಾರೆ.

ಬಳಿಕ ವೈದ್ಯಕೀಯ ಸಿಬ್ಬಂದಿ ಆತನನ್ನು ಆಂಬುಲೆನ್ಸ್ ಮೂಲಕ ಎಲಾಜಿಗ್‌ನ ಫಿರಟ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ಚಿಕಿತ್ಸೆ ಮೂಲಕ ಹೇರ್ ಬ್ಯಾಂಡ್ ಮತ್ತು ಚಾರ್ಜಿಂಗ್ ಕೇಬಲ್ ಅನ್ನು ಹೊರತೆಗೆಯಲಾಗಿದೆ. ಈ ಸಂದರ್ಭ ಉದ್ದದ ಕೇಬಲ್ ನೋಡಿ ವೈದ್ಯರು ನಿಜಕ್ಕೂ ಗೊಂದಲಕ್ಕೆ ಒಳಗಾಗಿದ್ದರು.

‘ಬಾಲಕನ ಹೊಟ್ಟೆಯಿಂದ ಕೇಬಲ್ ತೆಗೆಯುವುದು ನಿಜಕ್ಕೂ ಕಠಿಣ ಸನ್ನಿವೇಶವಾಗಿತ್ತು. ಕೇಬಲ್‌ನ ಒಂದು ತುದಿಯು ಸಣ್ಣ ಕರುಳಿನ ಒಳಗೆ ಸೇರಿಕೊಂಡಿತ್ತು’ಎಂದು ಡಾ. ದೊಗನ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೇಬಲ್ ಹೊರಗೆ ಬರುತ್ತಿದ್ದಂತೆ ವೈದ್ಯಕೀಯ ತಂಡ ಅಕ್ಷರಶಃ ಅಚ್ಚರಿಗೆ ಒಳಗಾಯಿತು. ಏಕೆಂದರೆ, ಅದರ ಉದ್ದ ಒಂದು ಮೀಟರ್(ಮೂರು ಅಡಿ) ಇತ್ತು.

ಹೊಟ್ಟೆಯಲ್ಲಿದ್ದ ಕೇಬಲ್ ತೆಗೆದ ಬಳಿಕ ಬಾಲಕ ಆರೋಗ್ಯವಾಗಿದ್ದು, ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಾರ್ಜಿಂಗ್ ಕೇಬಲ್ ಮತ್ತು ಹೇರ್ ಬ್ಯಾಂಡ್ಬಾಲಕನ ಹೊಟ್ಟೆಗೆ ಸೇರಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.