ಬೀಜಿಂಗ್ (ಪಿಟಿಐ):ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಬಾಹ್ಯಾಕಾಶ ಸಹಕಾರದ ಜಂಟಿ ಸಮಿತಿಯನ್ನು ಬುಧವಾರ ಅಧಿಕೃತವಾಗಿಪ್ರಾರಂಭಿಸಿವೆ.

ಬ್ರಿಕ್ಸ್ ದೇಶಗಳ ಬಾಹ್ಯಾಕಾಶ ಸಂಸ್ಥೆಗಳುದೂರಸಂವೇದಿ ಉಪಗ್ರಹ ಪರಿವೀಕ್ಷಣೆ ಮತ್ತು ದತ್ತಾಂಶ ಹಂಚಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವಉದ್ದೇಶದಿಂದ ಈ ಜಂಟಿ ಸಮಿತಿ ಪ್ರಾರಂಭಿಸಿವೆ.ಕಳೆದ ಆಗಸ್ಟ್‌ನಲ್ಲಿ, ಬ್ರಿಕ್ಸ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಸಮೂಹ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ವರ್ಷದ ಅಧ್ಯಕ್ಷ ಸ್ಥಾನ ಚೀನಾಕ್ಕೆ ಸಿಕ್ಕಿದೆ.

ಬುಧವಾರ ನಡೆದ ಸಮಿತಿಯ ಮೊದಲ ವರ್ಚುವಲ್ ಸಭೆಯಲ್ಲಿ ಮಾತನಾಡಿದಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಮುಖ್ಯಸ್ಥ ಜಾಂಗ್ ಕೆಜಿಯಾನ್, ‘ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿ ಬ್ರಿಕ್ಸ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಸಮೂಹ ಸಹಕರಿಸಲು ಈ ಮಂಡಳಿ ಸೂಕ್ತ ಮಾರ್ಗದರ್ಶನ ಮಾಡಲಿದೆ’ ಎಂದು ಹೇಳಿದರು.

ಸಮರ್ಥ ದತ್ತಾಂಶ ಹಂಚಿಕೆ ಮತ್ತು ಬಳಕೆಯೊಂದಿಗೆ ಹವಾಮಾನ ಬದಲಾವಣೆ ನಿಭಾಯಿಸಲು,ಪರಿಸರ ಸಂರಕ್ಷಣೆ ಹಾಗೂ ವಿಪತ್ತು ತಡೆಗಟ್ಟಲು ಬ್ರಿಕ್ಸ್ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ಮತ್ತು ಹೆಚ್ಚು ನಿಕಟವಾಗಿ ಕೆಲಸ ಮಾಡುವಂತೆ ಹೊಸ ಜಂಟಿ ಸಮಿತಿಯು ಸಹಕರಿಸಲಿದೆ ಎಂದು ಝಾಂಗ್ ಹೇಳಿರುವುದಾಗಿ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಷಿನುವಾವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.