ಬೈರೂತ್: ಕ್ರಿಸ್ಮಸ್ ಟ್ರೀಗೆ ಬೆಂಕಿ ಹಚ್ಚಿರುವುದನ್ನು ಖಂಡಿಸಿ ಸಿರಿಯಾದ ಸುಖೈಲಬಿಯಾ ನಗರದಲ್ಲಿ ಕೈಸ್ತ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಂತೆ ಪ್ರತಿಭಟನಾಕಾರರು ಇಸ್ಲಾಮಿಕ್ ಬಣ ಹಯಾತ್ ತೆಹ್ರೀರ್ ಅಲ್-ಶಾಮ್(ಎಚ್ಟಿಸಿ)ಗೆ ಆಗ್ರಹಿಸಿದ್ದಾರೆ.

ಘಟನೆಯ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಚ್ಟಿಸಿ, ಸಿರಿಯಾದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಭರವಸೆ ನೀಡಿದೆ. ಅಲ್ಲದೇ ಕೆಲ ವಿದೇಶಿ ಹೋರಾಟಗಾರರನ್ನು ಬಂಧಿಸಿರುವುದಾಗಿ ತಿಳಿಸಿದೆ.

ಇತ್ತೀಚೆಗೆ ಬಶರ್ ಅಲ್ ಅಸಾದ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಮೊಹಮ್ಮದ್ ಅಲ್ ಗೋಲಾನಿ ನೇತೃತ್ವದ ಹಯಾತ್ ತೆಹ್ರೀರ್ ಅಲ್-ಶಾಮ್ ಬಣ, ಸಿರಿಯಾದಲ್ಲಿ ಹಿಡಿತ ಸಾಧಿಸಿತ್ತು.

ಘಟನೆ ಏನು?

ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮಧ್ಯ ಸಿರಿಯಾದ ಸುಖೈಲಬಿಯಾ ನಗರದ ಮುಖ್ಯ ಚೌಕದಲ್ಲಿ ಇಡಲಾಗಿದ್ದ ಕ್ರಿಸ್ಮಸ್ ಟ್ರೀಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.