ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ: ಶಾಲಾ ಬಸ್‌ ಹರಿದು 11 ಮಂದಿ ಸಾವು

Published 3 ಸೆಪ್ಟೆಂಬರ್ 2024, 12:46 IST
Last Updated 3 ಸೆಪ್ಟೆಂಬರ್ 2024, 12:46 IST
ಅಕ್ಷರ ಗಾತ್ರ

ಬೀಜಿಂಗ್‌: ಶಾಲೆಯ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರ ಗುಂಪಿನ ಮೇಲೆ ಶಾಲಾ ಬಸ್‌ವೊಂದು ಹರಿದು 11 ಜನರು ಸಾವಿಗೀಡಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.

ಪೂರ್ವ ಚೀನಾದ ಶಾಂಡಾಂಗ್‌ ಪ್ರಾಂತ್ಯದ ಡಾಂಗ್‌ಪಿಂಗ್‌ನ ತೈಯಾನ್‌ ನಗರದಲ್ಲಿರುವ ಮಾಧ್ಯಮಿಕ ಶಾಲೆಯ ಆವರಣದ ಗೇಟ್‌ ಬಳಿ ಮಂಗಳವಾರ ಮುಂಜಾನೆ ಮಕ್ಕಳು ಮತ್ತು ಪೋಷಕರು ಇದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಆರು ಜನ ಪೋಷಕರು ಮತ್ತು ಐವರು ಮಕ್ಕಳು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 

ಬಸ್‌ ಚಾಲಕನನ್ನು ಬಂಧಿಸಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಾಂಗ್‌ಪಿಂಗ್‌ನ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT