ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಬೋಡಿಯಾ: ಹುನ್‌ ಸೆನ್‌ ಮಗನಿಗೆ ಪಟ್ಟ

Published 26 ಜುಲೈ 2023, 15:18 IST
Last Updated 26 ಜುಲೈ 2023, 15:18 IST
ಅಕ್ಷರ ಗಾತ್ರ

ನಾಮ್ ಪೆನ್‌/ಕಾಂಬೋಡಿಯಾ: ‘ಮೂರು ವಾರದಲ್ಲಿ ಹುದ್ದೆಯಿಂದ ಕೆಳಗಿಳಿಯಲಿದ್ದು, ನನ್ನ ಹಿರಿಯ ಮಗನಿಗೆ ಅಧಿಕಾರ ಹಸ್ತಾಂತರಿಸುವೆ’ ಎಂದು ಕಾಂಬೋಡಿಯಾದ ದೀರ್ಘಾವಧಿಯ ಪ್ರಧಾನಮಂತ್ರಿ ಹುನ್‌ ಸೆನ್‌ ಬುಧವಾರ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಬೋಡಿಯನ್‌ ಪೀಪಲ್ಸ್‌ ಪಾರ್ಟಿ ಜಯಭೇರಿ ಬಾರಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.

ಹುನ್‌ ಸೆನ್‌ 38 ವರ್ಷದಿಂದಲೂ ಕಾಂಬೋಡಿಯಾದ ನಿರಂಕುಶ ನಾಯಕನಾಗಿದ್ದಾರೆ. ಇದೀಗ ದೇಶದ ಸೇನೆಯ ಮುಖ್ಯಸ್ಥರಾಗಿರುವ ತಮ್ಮ ಪುತ್ರ ಹುನ್ ಮಾನೆಟ್‌ (45)ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

‘ಮಾನೆಟ್‌ ಐದು ವರ್ಷ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ’ ಎಂದು ಹುನ್‌ ಸೆನ್‌ ತಮ್ಮ ದೂರದರ್ಶನದ ಭಾಷಣದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT