ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬಿಕ್ಕಟ್ಟು: ಐಎಂಎಫ್‌ನಿಂದ ಹೆಚ್ಚುವರಿ ನೆರವು ಕೋರಿದ ಪಾಕಿಸ್ತಾನ

Published 20 ಏಪ್ರಿಲ್ 2024, 14:27 IST
Last Updated 20 ಏಪ್ರಿಲ್ 2024, 14:27 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಹವಾಮಾನ ನಿಧಿಯ ಮೂಲಕ ಮುಂದಿನ ಬಾರಿ ಪಾಕಿಸ್ತಾನಕ್ಕೆ ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿಯವರೆಗೆ ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ(ಐಎಂಎಫ್) ಮನವಿ ಮಾಡಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ವಿಶ್ವಬ್ಯಾಂಕ್‌ನ ಮಾಸಿಕ ಸಭೆಯಲ್ಲಿ ಭಾಗಿಯಾಗಿರುವ ಪಾಕಿಸ್ತಾನದ ವಿತ್ತ ಸಚಿವ ಮೊಹಮ್ಮದ್ ಔರಂಗಜೇಬ್ ಅವರನ್ನು ಒಳಗೊಂಡ ಉನ್ನತ ಸಮಿತಿಯು, ‘ವಿಸ್ತರಿತ ನಿಧಿ ಸೌಲಭ್ಯದಡಿ ಮುಂದಿನ 3 ವರ್ಷ ನೆರವು ನೀಡಲು ಅಗತ್ಯವಾದ ಮಾಹಿತಿ ಪಡೆಯಲು ಮುಂದಿನ ತಿಂಗಳು ಪರಿಶೀಲನಾ ತಂಡವನ್ನು ಕಳುಹಿಸುವಂತೆ’ ಐಎಮ್‌ಎಫ್‌ಗೆ ಮನವಿ ಮಾಡಿದೆ.

‘ಹೆಚ್ಚುವರಿ ನೆರವಿನ ಪ್ರಮಾಣ ಮತ್ತು ಅವಧಿಯ ಬಗ್ಗೆ ಮೇ ತಿಂಗಳಿನ ಬಳಿಕ ನಿರ್ಧಾರವಾಗಲಿದೆ’ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ.

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಐಎಂಎಫ್‌ನೊಂದಿಗೆ ಮಾಡಿಕೊಂಡಿರುವ ಸುಮಾರು ₹25 ಸಾವಿರ ಕೋಟಿ ನೆರವಿನ ಒಪ್ಪಂದವು ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದ್ದು, ಪಾಕಿಸ್ತಾನ ಹೆಚ್ಚುವರಿ ನೆರವನ್ನು ಬಯಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT