ಕರಾಚಿ : ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ಗೆ (ಪಿಐಎ) ಸೇರಿದ ವಿಮಾನ ಶುಕ್ರವಾರ ಮಧ್ಯಾಹ್ನ ಕರಾಚಿಯ ಜನದಟ್ಟಣೆಯಿಂದ ಕೂಡಿದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನ ಪತನಗೊಳ್ಳುವ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

'ವೆದರ್ ಆಫ್ ಕರಾಚಿ’ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ವಿಮಾನ ಪತನದ ವಿಡಿಯೊವನ್ನು ಹೊಂಚಿಕೊಂಡಿದ್ದು, ಬೆಚ್ಚಿಬೀಳಿಸುವಂತಿದೆ. ಸದ್ಯ ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಕರಾಚಿಯಲ್ಲಿ ವಿಮಾನ ಪತನ: 57 ಸಾವು

ವಿಮಾನದಲ್ಲಿ 107 ಜನರಿದ್ದರು. ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮುನ್ನ ವಿಮಾನ ಅಪಘಾತಕ್ಕೀಡಾಗಿದೆ. ಪವಾಡಸದೃಶ ರೀತಿಯಲ್ಲಿ ಮೂವರು ಪ್ರಯಾಣಿಕರು ಬದುಕುಳಿದಿದ್ದಾರೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಲ್ಲಿ ಬ್ಯಾಂಕ್ ಆಫ್ ಪಂಜಾಬ್‌ನ ಅಧ್ಯಕ್ಷ ಜಫರ್ ಮಸೂದ್ ಒಬ್ಬರು. 57 ಮೃತದೇಹಗಳನ್ನು ಪತನ ಸ್ಥಳದಿಂದ ಹೊರಕ್ಕೆ ತೆಗೆಯಲಾಗಿದೆ.

‘ಲಾಹೋರ್‌ನಿಂದ ಬರುತ್ತಿದ್ದ ‘ಪಿಕೆ–8303’ ವಿಮಾನದಲ್ಲಿ 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು. ಕರಾಚಿ ವಿಮಾನ ನಿಲ್ದಾಣ ಸಮೀಪದ ಮಾಡೆಲ್ ಕಾಲೋನಿಯಲ್ಲಿ ವಿಮಾನ ಪತನಗೊಂಡಿತು’ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸಂಭವಿಸಿದ ಈ ವಿಮಾನ ದುರಂತಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.