ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆರೆಯ ರಾಷ್ಟ್ರಗಳ ಜೊತೆಗಿನ ವ್ಯಾಪಾರ ವಹಿವಾಟು ಭಾರಿ ಹೆಚ್ಚಳ: ಚೀನಾ

Published 4 ಮಾರ್ಚ್ 2024, 15:02 IST
Last Updated 4 ಮಾರ್ಚ್ 2024, 15:02 IST
ಅಕ್ಷರ ಗಾತ್ರ

ಬೀಜಿಂಗ್: ದಕ್ಷಿಣ ಚೀನಾ ಸಮುದ್ರ ವಿವಾದ ಮತ್ತು ಪೂರ್ವ ಲಡಾಖ್ ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತ ಸೇರಿದಂತೆ ಏಷ್ಯಾದ ನೆರೆಯ ದೇಶಗಳೊಂದಿಗೆ ಬಿಕ್ಕಟ್ಟು ಹೆಚ್ಚಾಗಿದೆ ಎಂಬುದನ್ನು ಚೀನಾ ಅಲ್ಲಗಳೆದಿದೆ. ಅಲ್ಲದೆ, ಬೆಲ್ಟ್‌ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ) ರೀತಿಯ ಯೋಜನೆಗಳು ವೇಗ ಪಡೆಯುತ್ತಿದ್ದು, ನೆರೆಯ ದೇಶಗಳ ಜೊತೆಗಿನ ವ್ಯಾಪಾರವು ಹೆಚ್ಚಳವಾಗಿದೆ ಎಂದೂ ಅದು ಹೇಳಿದೆ. 

ದಕ್ಷಿಣ ಚೀನಾ ವಿವಾದವನ್ನು ಬಗೆಹರಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ. ಅಲ್ಲದೆ ಏಷ್ಯಾದ ನೆರೆಯ ರಾಷ್ಟ್ರಗಳೊಂದಿಗೂ ಚೀನಾ ಬಿಕ್ಕಟ್ಟು ಸೃಷ್ಟಿಸಿದೆ ಎಂಬ ಅಭಿಪ್ರಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ಸಂಸತ್ತಿನ ವಕ್ತಾರ ಲೂ ಕ್ವಿಂಜಿಯಾನ್, ‘ರಾಜತಾಂತ್ರಿಕ ಕಾರ್ಯದ ವಿಚಾರದಲ್ಲಿ ತನ್ನ ನೆರೆಯ ಹೊರೆಯ ರಾಷ್ಟ್ರಗಳಿಗೆ ಚೀನಾ ಹೆಚ್ಚಿನ ಪ್ರಾಧಾನ್ಯ ನೀಡಿದೆ’ ಎಂದು ಹೇಳಿದರು. 

‘ನೀವು ದಕ್ಷಿಣ ಚೀನಾ ಸಮುದ್ರದ ಬಗ್ಗೆ ಪ್ರಸ್ತಾಪಿಸಿದ್ದೀರಿ. ತನ್ನ ಸಾರ್ವಭೌಮತ್ವ ಮತ್ತು ಸಮುದ್ರಯಾನದ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಚೀನಾ ಸದಾ ಬದ್ಧವಾಗಿರಲಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಹಾಗೂ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಯಾ ದೇಶಗಳೊಂದಿಗೆ ಚೀನಾ ಮಾತುಕತೆ ನಡೆಸಲಿದೆ’ ಎಂದಿದ್ದಾರೆ. 

ದಕ್ಷಿಣ ಚೀನಾ ಸಮುದ್ರದ ಬಹುಭಾಗವನ್ನು ತನ್ನದು ಎಂದು ಚೀನಾ ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಆ ಭಾಗವು ತಮ್ಮದು ಎಂದು ಫಿಲಿಪ್ಪೀನ್ಸ್, ವಿಯೆಟ್ನಾಂ, ಮಲೇಷಿಯಾ, ಬ್ರುನಿ ಮತ್ತು ತೈವಾನ್ ಪ್ರತಿವಾದ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT