ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ನತ್ತ 38 ಯುದ್ಧವಿಮಾನ, 6 ಯುದ್ಧನೌಕೆ ರವಾನಿಸಿದ ಚೀನಾ

Published 28 ಏಪ್ರಿಲ್ 2023, 4:18 IST
Last Updated 28 ಏಪ್ರಿಲ್ 2023, 4:18 IST
ಅಕ್ಷರ ಗಾತ್ರ

ತೈಪೆ: ತೈವಾನ್‌ನತ್ತ 38 ಯುದ್ಧವಿಮಾನ ಹಾಗೂ ಆರು ಯುದ್ಧನೌಕೆಗಳನ್ನು ಚೀನಾ ರವಾನಿಸಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ.

ಕಳೆದ ತಿಂಗಳು ಚೀನಾ ನಡೆಸಿದ ಮಿಲಿಟರಿ ತಾಲೀಮು ಬಳಿಕದ ಅತಿ ದೊಡ್ಡ ಶಕ್ತಿ ಪ್ರದರ್ಶನ ಇದಾಗಿದೆ.

ತೈವಾನ್ ಜಲಸಂಧಿಯ ಮಧ್ಯಭಾಗದಲ್ಲಿ ಚೀನಾ ಯುದ್ಧವಿಮಾನಗಳು ಹಾರಾಟ ನಡೆಸಿವೆ. ಶಕ್ತಿಶಾಲಿ ಐದು ಎಸ್‌ಯು-30, ಎರಡು ಜೆ-16 ಹಾಗೂ ಟಿಬಿ-001 ಡ್ರೋನ್ ಹಾರಾಟ ನಡೆಸಿ ಭೀತಿಯ ವಾತಾವರಣ ಸೃಷ್ಟಿಸಿವೆ.

ತೈವಾನ್ ಅಧ್ಯಕ್ಷರ ಅಮೆರಿಕ ಪ್ರವಾಸದ ಬಳಿಕ ಚೀನಾ ನಿರಂತರವಾಗಿ ಸೇನಾ ತಾಲೀಮು ನಡೆಸುತ್ತಿದೆ.

1949ರ ನಾಗರಿಕ ಯುದ್ಧದ ನಂತರ ಚೀನಾ ಹಾಗೂ ತೈವಾನ್ ಪ್ರತ್ಯೇಕವಾಗಿವೆ. ಆದರೆ ತೈವಾನ್ ದ್ವೀಪವು ತನ್ನ ಭೂಪ್ರದೇಶಕ್ಕೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT