ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಷ್‌ ಉಗ್ರ ರವೂಫ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ವಿರೋಧ

Published 11 ಮೇ 2023, 5:48 IST
Last Updated 11 ಮೇ 2023, 5:48 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್‌–ಎ–ಮೊಹಮ್ಮದ್‌ನ ಉಗ್ರ ಅಬ್ದುಲ್ ರವೂಫ್‌ ಅಝರ್‌ನನ್ನು ಕಪ್ಪು ‍ಪಟ್ಟಿಗೆ ಸೇರಿಸುವ ಭಾರತ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ವಿರೋಧಿಸಿದೆ.

ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಝರ್‌ನ ಸಹೋದರನಾಗಿರುವ ರವೂಫ್‌, 1999ರ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಅಪಹರಣ ಪ್ರಕರಣ, 2001ರ ಸಂಸತ್ ದಾಳಿ ಹಾಗೂ 2016ರ ‍ಪಠಾಣ್‌ಕೋಟ್‌ ದಾಳಿಯಲ್ಲಿ ಕೈವಾಡ ಇತ್ತು.

ರವೂಫ್‌ ಅಝರ್‌ ಮೇಲೆ 2010ರಲ್ಲಿ ಅಮೆರಿಕ ನಿರ್ಬಂಧ ಹೇರಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ, ಕಳೆದ ವರ್ಷ ಆಗಸ್ಟ್‌ನಲ್ಲಿ ತನ್ನ ವಿಟೋ ಅಧಿಕಾರವನ್ನು ಉಪಯೋಗಿಸಿ, ರವೂಫ್‌ ಅಝರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಭಾರತದ ಪ್ರಸ್ತಾಪವನ್ನು ಚೀನಾ ವಿರೋಧಿಸಿತ್ತು.

ಪಾಕಿಸ್ತಾನ ಮಿತ್ರರಾಷ್ಟ್ರವಾಗಿರುವ ಚೀನಾ, ಪಾಕಿಸ್ತಾನ ಮೂಲದ ಉಗ್ರರಾದ ಹಫೀಜ್ ತಲಾಹ್‌ ಸಯೀದ್‌, ಲಷ್ಕರ್‌–ಎ–ತೊಯ್ಬಾ ನಾಯಕ ಶಹೀದ್‌ ಮಹ್ಮೂದ್‌ ಹಾಗೂ ಲಷ್ಕರ್‌–ಎ–ತಯ್ಯಿಬಾದ ಸಾಜಿದ್‌ ಮೀರ್‌ ಮುಂತಾದವರನ್ನು ಕಪ್ಪು ಪಟ್ಟಿಗೆ ಸೇರಿಸುವುದಕ್ಕೂ ಚೀನಾ ಅಪಸ್ವರ ಎತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT