ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾತಾವರಣಕ್ಕೆ ಕಡಿಮೆ ಇಂಗಾಲ ಸೇರುವಂತೆ ಮಾಡಲು ಚೀನಾದ ಸಿಚುವಾನ್‌ನಿಂದ ಕ್ರಿಯಾಯೋಜನೆ

Last Updated 10 ಏಪ್ರಿಲ್ 2021, 6:30 IST
ಅಕ್ಷರ ಗಾತ್ರ

ಶಾಂಘೈ: ವಾತಾವರಣಕ್ಕೆ ಕಡಿಮೆ ಪ್ರಮಾಣದ ಇಂಗಾಲ ಸೇರುವಂತೆ ಮಾಡುವುದನ್ನು ಖಾತರಿಪಡಿಸುವುದು ಸೇರಿದಂತೆ ಹವಾಮಾನ ಬದಲಾವಣೆ ತಡೆಗಾಗಿ ನಿಗದಿಪಡಿಸಿರುವ ಗುರಿಯನ್ನು ತಲುಪಲು ಸಿಚುವಾನ್‌ ಪ್ರಾಂತ್ಯದ ಆಡಳಿತ ಹೊಸ ಕ್ರಿಯಾ ಯೋಜನೆ ರೂಪಿಸಿದೆ.

ಹವಾಮಾನ ಬದಲಾವಣೆ ತಡೆಗಾಗಿ ನಿಗದಿ ಮಾಡಿರುವ ಗುರಿಗಳನ್ನು ತಲುಪುವ ಸಂಬಂಧ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ ಮೊಟ್ಟಮೊದಲ ಪ್ರಾಂತ್ಯ ಎಂಬ ಹೆಗ್ಗಳಿಕೆ ಸಿಚುವಾನ್‌ದು ಎಂದು ‘ಚೀನಾ ಎನ್ವಿರಾನ್‌ಮೆಂಟ್‌ ನ್ಯೂಸ್‌’ ವರದಿ ಮಾಡಿದೆ.

‘ಹೆಚ್ಚು ಸಸಿಗಳನ್ನು ನೆಡುವಂತೆ ಜನರನ್ನು ಪ್ರೋತ್ಸಾಹಿಸುವುದು. ಆ ಮೂಲಕ ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ನಿಯಂತ್ರಿಸುವಂತೆ ಜನರಿಗೆ ಮನವರಿಕೆ ಮಾಡಿಕೊಡುವುದು. ಇಂಧನ ಬಳಕೆಯನ್ನು ಕಡಿತಗೊಳಿಸುವ ಮೂಲಕ ನಗರ ಪ್ರದೇಶದ ವಾತಾವಣರದಲ್ಲಿ ಬದಲಾವಣೆ ತರುವುದು ಈ ಕ್ರಿಯಾಯೋಜನೆಯ ಪ್ರಮುಖ ಅಂಶಗಳಾಗಿವೆ’ ಎಂದು ಮೂಲಗಳು ಹೇಳಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT