ಬೀಜಿಂಗ್: ತೈವಾನ್ ಚೀನಾದ ಅವಿಭಾಜ್ಯ ಅಂಗ. ಅಂತಿಮವಾಗಿ ಅದು ತಾಯ್ನಾಡಿನ ಮಡಿಲು ಸೇರಲಿದೆ,’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಇದನ್ನೂ ಓದಿ:ಹೊಸ ವರ್ಷದ ಭಾಷಣ: ಚೀನಾಗೆ ಎಚ್ಚರಿಕೆ ರವಾನಿಸಿದ ತೈವಾನ್ ಅಧ್ಯಕ್ಷೆ

ರಷ್ಯಾದ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿರುವ ಉಕ್ರೇನಿಯನ್ನರು ತೈವಾನ್ ಜನರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ತೈವಾನ್ ವಿದೇಶಾಂಗ ಸಚಿವ ‘ಜೋಸೆಫ್ ವು’ ಹೇಳಿದ್ದರು. ಆ ಮೂಲಕ ವೈರಿ ರಾಷ್ಟ್ರ ಚೀನಾಗೆ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಚೀನಾ, ‘ತೈವಾನ್ ಮುಂದೊಂದು ದಿನ ಚೀನಾದ ಮಡಿಲು ಸೇರಲೇಬೇಕು’ ಎಂದು ಹೇಳಿದೆ.

ಇದನ್ನೂ ಓದಿ:ಯುದ್ಧ ಜ್ವಾಲೆಯಲ್ಲಿ ಸಿಲುಕಲಿದೆ ಚೀನಾ: ತೈವಾನ್ನಿಂದ ಮಿಲಿಟರಿ ವಿಡಿಯೊ ಸಂದೇಶ

ಚೀನಾವನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕದಲ್ಲಿರುವ ಕೆಲವು ಶಕ್ತಿಗಳು ‘ಸ್ವತಂತ್ರ ತೈವಾನ್’ನ’ ಪ್ರತಿಪಾದಕರನ್ನು ಬೆಂಬಲಿಸುತ್ತಿವೆ. ಆ ಮೂಲಕ ಚೀನಾಕ್ಕೆ ಸವಾಲು ಹಾಕಲಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

‘ಚೀನಾವನ್ನು ನಿಯಂತ್ರಿಸಲು ತೈವಾನ್ ಅನ್ನು ಬಳಸುವ ಪ್ರಯತ್ನಗಳು ವಿಫಲಗೊಳ್ಳುತ್ತವೆ’ ಎಂದು ಸಚಿವ ವಾಂಗ್ ಯಿ ಹೇಳಿದ್ದಾರೆ.

‘ಅಮೆರಿಕದ ಒತ್ತಡದ ನಡುವೆಯೂ ಚೀನಾ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಚೀನಾ ಸಿದ್ಧವಾಗಿದೆ’ ಎಂದು ವಾಂಗ್ ಹೇಳಿದರು.

ಇದನ್ನೂ ಓದಿ:ತೈವಾನ್ನತ್ತ ಯುದ್ಧ ವಿಮಾನ ರವಾನಿಸಿದ ಚೀನಾ

ತೈವಾನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆ ವಿರುದ್ಧ ಕೆಂಗಣ್ಣು ಬೀರಿದ್ದ ಚೀನಾ, ಅಮೆರಿಕದ ಶಸ್ತ್ರಾಸ್ತ್ರ ತಯಾರಕ ಸಂಸ್ಥೆಗಳಾದ ‘ಲಾಕ್‌ಹೀಡ್ ಮಾರ್ಟಿನ್’ ಮತ್ತು ‘ರೇಥಿಯಾನ್ ಟೆಕ್ನಾಲಜೀಸ್’ ಸಂಸ್ಥೆಗಳನ್ನು ಗುರಿಯಾಗಿಸಿ ನಿರ್ಬಂಧಗಳನ್ನು ವಿಧಿಸಿತ್ತು.

ಇದನ್ನೂ ಓದಿ:ಸಮರಾಭ್ಯಾಸದ ಮೂಲಕ ತೈವಾನ್ ಶಕ್ತಿ ಪ್ರದರ್ಶನ: ಚೀನಾಗೆ ಎಚ್ಚರಿಕೆ ಸಂದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.