ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗೊ: ಪತ್ನಿ ಸೇರಿದಂತೆ 13 ಜನರನ್ನು ಕೊಂದ ಸೈನಿಕ

Published 23 ಜುಲೈ 2023, 20:43 IST
Last Updated 23 ಜುಲೈ 2023, 20:43 IST
ಅಕ್ಷರ ಗಾತ್ರ

ಗೋಮಾ (ಕಾಂಗೊ): ತಾನು ಮನೆಗೆ ಬರುವ ಮುನ್ನವೇ ಮಗನ ಅಂತ್ಯಸಂಸ್ಕಾರ ಕಾರ್ಯಕ್ರಮ ನೆರವೇರಿಸಿದ ಪತ್ನಿ ಹಾಗೂ ಕುಟುಂಬದ ಇತರ 12 ಸದಸ್ಯರನ್ನು ಸೈನಿಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಈಶಾನ್ಯ ಕಾಂಗೊದಲ್ಲಿ ಭಾನುವಾರ ನಡೆದಿದೆ. 

ಘಟನೆಯಲ್ಲಿ ಸೈನಿಕನ ಪತ್ನಿ, ಇಬ್ಬರು ಮಕ್ಕಳು ಹಾಗೂ ಅತ್ತೆ– ಮಾವ ಸಾವಿಗೀಡಾಗಿದ್ದಾರೆ ಎಂದು ಇತುರಿ ಪ್ರಾಂತ್ಯದ ಸೇನಾ ವಕ್ತಾರ ಜ್ಯೂಲೊನೊಂಗೊ ಮಾಹಿತಿ ನೀಡಿದ್ದಾರೆ. ಗುಂಡು ಹಾರಿಸಿದ ಸೈನಿಕ ಗುರುತು ಇನ್ನೂ ಪತ್ತೆಯಾಗಿಲ್ಲ. 

ತನ್ನ ಅನುಪಸ್ಥಿತಿಯಲ್ಲಿ ಅನುಮತಿ ಇಲ್ಲದೇ ಮಗನ ಅಂತ್ಯಸಂಸ್ಕಾರ ನೆರವೇರಿಸಲು ಸೈನಿಕ ಇಚ್ಛೆ ಪಟ್ಟಿರಲಿಲ್ಲ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT