ಲಂಡನ್: ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕಾ ಕಂಪನಿ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಮನುಷ್ಯನ ಮೇಲೆ ಪ್ರಯೋಗ) ಪ್ರಗತಿಯಲ್ಲಿದೆ. ಕೊರೊನಾ ವೈರಸ್ನ ವಿರುದ್ಧ ಹೇಗೆ ವರ್ತಿಸಬೇಕು ಎಂದು ನಿರ್ದೇಶಿಸಲಾಗಿದೆಯೋ, ಲಸಿಕೆಯು ಹಾಗೆಯೇ ವರ್ತಿಸುತ್ತಿದೆ ಎಂಬುದನ್ನು ಸ್ವತಂತ್ರ ಅಧ್ಯಯನವೊಂದು ಸಾಬೀತು ಮಾಡಿದೆ.

‘ಮನುಷ್ಯನ ದೇಹದೊಳಗೆ ಸೇರಿದಾಗ ಹೇಗೆ ವರ್ತಿಸಬೇಕು ಎಂಬ ಆನುವಂಶಿಕ ನಿರ್ದೇಶನಗಳನ್ನು ಲಸಿಕೆಯ ವಿನ್ಯಾಸದಲ್ಲೇ ಸೇರಿಸಲಾಗಿರುತ್ತದೆ. ಈ ಲಸಿಕೆಯು ಆನುವಂಶಿಕ ನಿರ್ದೇಶನಗಳನ್ನು ಕರಾರುವಕ್ಕಾಗಿ ಪಾಲಿಸು
ತ್ತಿದೆ. ನೂತನವಾಗಿ ಅಭಿವೃದ್ಧಿಪಡಿಸಲಾದ ವಿಧಾನದಿಂದ ಇದನ್ನು ಪರೀಕ್ಷಿಸಲಾಗಿದೆ. ಈವರೆಗೆ ಇಷ್ಟು ಕರಾರುವಕ್ಕಾಗಿ ಪರಿಶೀಲನೆ ನಡೆಸುವಂತಹ ವಿಧಾನ ಇರಲಿಲ್ಲ’ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಹೇಳಿದೆ. ಈ ಅಧ್ಯಯನ ವರದಿಯು ‘ರಿಸರ್ಚ್ಸ್ಕ್ವೇರ್’ನಲ್ಲಿ ಪ್ರಕಟವಾಗಿದೆ.

‘ಈ ಕೋವಿಡ್ ಲಸಿಕೆಯು ಮನುಷ್ಯನ ದೇಹದಲ್ಲಿ ಪ್ರಬಲ ಪ್ರತಿರೋಧಕ ಕಣಗಳನ್ನು ಸೃಷ್ಟಿಸುತ್ತದೆ ಎಂಬುದು ಪತ್ತೆಯಾಗಿದೆ. ಕೋವಿಡ್ ಲಸಿಕೆ ನಿರೀಕ್ಷಿತ ಮಟ್ಟದಲ್ಲಿ ಮತ್ತು ನಿರೀಕ್ಷಿತ ಸ್ವರೂಪದಲ್ಲೇ ಕೆಲಸ ಮಾಡುತ್ತಿದೆ ಎಂಬುದು ಗೊತ್ತಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಬೆಳವಣಿಗೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಚಿಂಪಾಜಿಗಳಲ್ಲಿ ನೆಗಡಿಗೆ ಕಾರಣವಾಗುವ ಆಂಡಿರೊವೈರಸ್ ಅನ್ನು ತೆಗೆದುಕೊಂಡು ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಆಂಡಿರೊವೈರಸ್ನಲ್ಲಿರುವ ರೋಗಕಾರಕ ಶಕ್ತಿಯನ್ನು ನಿಷ್ಕ್ರಿಯ ಮಾಡಲಾಗಿದೆ. ಆನಂತರ ಉಳಿಯುವ ವೈರಸ್ ಅನ್ನು ಬಳಸಿಕೊಂಡು ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ರೋಗಕಾರಕ ಶಕ್ತಿಯನ್ನು ನಿಷ್ಕ್ರಿಯ ಮಾಡಿರುವುದರಿಂದ, ಮನುಷ್ಯನ ದೇಹದಲ್ಲಿ ರೋಗವನ್ನು ಉಂಟುಮಾಡುವ ಶಕ್ತಿ ಲಸಿಕೆಯಲ್ಲಿ ಇರುವುದಿಲ್ಲ. ಬದಲಿಗೆ ಲಸಿಕೆಯನ್ನು ಮನುಷ್ಯನ ದೇಹಕ್ಕೆ ಸೇರಿಸಿದ ನಂತರ ಅದು ಭಾರಿ ಸಂಖ್ಯೆಯಲ್ಲಿ ಕೊರೊನಾವೈರಸ್ ಸ್ಪೈಕ್ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ. ಸ್ಪೈಕ್ ಪ್ರೋಟೀನ್ ಎಂಬುದು ಯಾವುದೇ ವೈರಸ್ನ ಹೊರಕವಚವಾಗಿರುತ್ತದೆ’ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

‘ಮನುಷ್ಯನ ದೇಹದಲ್ಲಿ ಕೊರೊನಾವೈರಸ್ನ ಹೊರಕವಚವಷ್ಟೇ ಉತ್ಪಾದನೆಯಾಗುತ್ತದೆ. ಇದು ವೈರಸ್ ಅನ್ನು ಹೋಲುವುದರಿಂದ, ದೇಹದೊಳಗಿನ ಪ್ರತಿರೋಧ ಕಣಗಳು ಕೊರೊನಾವೈರಸ್ ವಿರುದ್ಧ ಹೋರಾಡುವ ಶಕ್ತಿ ಬೆಳೆಸಿಕೊಳ್ಳುತ್ತವೆ. ಲಸಿಕೆ ಪಡೆದಿರುವ ವ್ಯಕ್ತಿಗೆ ನಿಜವಾದ ಕೊರೊನಾವೈರಸ್ ತಗುಲಿದರೆ, ಆತನ ದೇಹದಲ್ಲಿ ಈಗಾಗಲೇ ಅಭಿವೃದ್ಧಿಯಾಗಿರುವ ಪ್ರತಿರೋಧ ಶಕ್ತಿಯು ಕಾಯಿಲೆ ಬರದಂತೆ ತಡೆಯುತ್ತದೆ’ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಯು ಮನುಷ್ಯ ದೇಹದಲ್ಲಿ, ಕೊರೊನಾವೈರಸ್ ಸ್ಪೈಕ್ ಪ್ರೋಟೀನ್ (ಹೊರಕವಚ) ಅನ್ನು ಹೇಗೆ ಉತ್ಪಾದಿಸುತ್ತದೆ ಮತ್ತು ಪ್ರತಿರೋಧ ಶಕ್ತಿಯನ್ನು ಹೇಗೆ ಅಭಿವೃದ್ಧಿಪಡಿಸುತ್ತದೆ ಎಂಬುದರ ಮೇಲೆ ಸಂಶೋಧನೆ ನಡೆಸಲಾಗಿತ್ತು.ಈ ಲಸಿಕೆಯು ನಿರೀಕ್ಷೆಯಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪೈಕ್ ಪ್ರೋಟೀನ್ಗಳನ್ನು ಉತ್ಪಾದಿಸಿತು ಮತ್ತು ಪ್ರತಿರೋಧ ಶಕ್ತಿಯನ್ನು ಅಭಿವೃದ್ಧಿಪಡಿಸಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.