ಬೆಂಗಳೂರು: ಜಾಗತಿಕವಾಗಿ ಒಟ್ಟು 3,02,41,377 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ 2,20,31,229 ಮಂದಿ ಗುಣಮುಖರಾಗಿದ್ದರೆ, ಸೋಂಕಿನಿಂದ 9,47,246ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ಜಗತ್ತಿನಾದ್ಯಂತ 73,59,178 ಸಕ್ರಿಯ ಪ್ರಕರಣಗಳಿವೆ.

ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದವರು ಹಾಗೂ ಒಟ್ಟು ಪ್ರಕರಣಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಒಟ್ಟು 66,81,251 ಪ್ರಕರಣಗಳು ವರದಿಯಾಗಿವೆ ಹಾಗೂ 19,7,763 ಮಂದಿ ಸಾವಿಗೀಡಾಗಿದ್ದಾರೆ. 25,17,344 ಸಕ್ರಿಯ ಪ್ರಕರಣಗಳಿದ್ದು, 41,55,039 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕಿಂತ ಸಾವಿನ ಪ್ರಮಾಣದಲ್ಲಿ ಬ್ರೆಜಿಲ್ ಮುಂದಿದೆ. ದಾಖಲಾಗಿರುವ 44,57,443 ಪ್ರಕರಣಗಳ ಪೈಕಿ 1,35,031 ಮಂದಿ ಮೃತಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಕೊವಾಕ್ಸ್ ಮೂಲಕ ಲಸಿಕೆ ಖರೀದಿಸುವುದಿಲ್ಲ: ಜರ್ಮನಿ

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದ ಮೂಲಕ ಸಂಭಾವ್ಯ ಕೋವಿಡ್ -19 ಲಸಿಕೆಗಳನ್ನು ಖರೀದಿಸುವುದಿಲ್ಲ ಎಂದುಜರ್ಮನಿ ಹೇಳಿದೆ. ಅದೇ ವೇಳೆ ತಾವು ಈ ಯೋಜನೆಯನ್ನು ಬೆಂಬಲಿಸುವುದಾಗಿ ಸರ್ಕಾರದ ಮೂಲಗಳು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಈಗಾಗಲೇ ನಾವು ಯುರೋಪಿಯನ್ ಒಕ್ಕೂಟದ ಯೋಜನೆ ಮೂಲಕ ಸಂಭಾವ್ಯ ಲಸಿಕೆಯನ್ನು ಖರೀದಿಸುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆಯ ಕೊವಾಕ್ಸ್ ಕಾರ್ಯಕ್ರಮದ ಮೂಲಕ ಲಸಿಕೆ ಖರೀದಿ ಮಾಡುವುದಿಲ್ಲ ಎಂದು ಬರ್ಲಿನ್ ಮೂಲಗಳುಹೇಳಿವೆ.
ಕೊನಾಕ್ಸ್ ಕಾರ್ಯಕ್ರಮಕ್ಕೆ ಕೈ ಜೋಡಿಸುವ ಸದಸ್ಯರು ನೋಂದಣಿ ಮಾಡಲು ಶುಕ್ರವಾರ ಅಂತಿಮ ದಿನಾಂಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು, ಕೋವಿಡ್ ಲಸಿಕೆಗಳನ್ನು ಖರೀದಿಸಿ ಅವುಗಳನ್ನು ಸುರಕ್ಷಿತವಾಗಿ ಜಗತ್ತಿನಾದ್ಯಂತ ತಲುಪಿಸುವ ಕಾರ್ಯವನ್ನು ಕೊವಾಕ್ಸ್ ಕಾರ್ಯಕ್ರಮ ನಿರ್ವಹಿಸಲಿದೆ.

ಲಂಡನ್‌ನಲ್ಲಿ ಹೊಸ ವರ್ಷಾಚರಣೆಗೆ ಸಿಡಿಮದ್ದು ಪ್ರದರ್ಶನ ಇರುವುದಿಲ್ಲ
ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಹೊಸವರ್ಷಾಚರಣೆಗೆ ಲಂಡನ್‌ನಲ್ಲಿ ಸಿಡಿಮದ್ದು ಪ್ರದರ್ಶನವಿರುವುದಿಲ್ಲ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಮತ್ತೆ ಲಾಕ್‍ಡೌನ್
ಇಸ್ರೇಲ್‌ನಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಲೇ ಇರುವುದರಿಂದ ಶುಕ್ರವಾರ ದೇಶದಾದ್ಯಂತ ಎರಡನೇ ಬಾರಿ ಲಾಕ್‌ಡೌನ್ ಘೋಷಣೆಯಾಗಿದೆ. ರೋಶ್ ಹಷಾನಾ (ಯೆಹೂದಿಗಳ ಹೊಸ ವರ್ಷ) ಆಚರಣೆ ಮತ್ತು ಧಾರ್ಮಿಕ ರಜಾದಿನಗಳಾದಯೋಮ್ ಕಿಪ್ಪೂರ್ ಮತ್ತು ಸುಕೋಟ್ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಲಾಕ್‍ಡೌನ್ಘೋಷಣೆ ಆಗಿದೆ.ಮೂರುವಾರಗಳ ಕಾಲ ಇಲ್ಲಿ ಲಾಕ್‌ಡೌನ್ ಇರಲಿದೆ.ರೋಗ ನಿಯಂತ್ರಿಸಲು ಲಾಕ್‍ಡೌನ್ ಹೊರತು ಪಡಿಸಿ ಬೇರೆ ಯಾವುದೇ ಮಾರ್ಗಗಳಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 52 ಲಕ್ಷ ದಾಟಿದ್ದು, 84 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿರುವುದು ವರ್ಡೊಮೀಟರ್ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಚೀನಾದಲ್ಲಿ ಗುರುವಾರ ಕೋವಿಡ್–19 ದೃಢಪಟ್ಟ 32 ಹೊಸ ಪ್ರಕರಣಗಳು ದಾಖಲಾಗಿವೆ. ಚೀನಾದಲ್ಲಿ ಒಟ್ಟು 85,255 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ ಹಾಗೂ 4,634 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಮೆಕ್ಸಿಕೊ ಆರೋಗ್ಯ ಸಚಿವಾಲಯದ ಪ್ರಕಾರ, 3,182 ಹೊಸ ಪ್ರಕರಣಗಳು ದಾಖಲಾಗಿದ್ದು, 201 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈವರೆಗೆ ಒಟ್ಟು 6,84,113 ಪ್ರಕರಣಗಳು ದಾಖಲಾಗಿವೆ ಹಾಗೂ 72,179 ಮಂದಿ ಮೃತಪಟ್ಟಿದ್ದಾರೆ.

ಇನ್ನೂ ರಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,85,281ಕ್ಕೆ ಏರಿಕೆಯಾಗಿದೆ. ಪ್ರಸ್ತುತ 1,70,352 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ 19,061 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.