ನ್ಯೂಯಾರ್ಕ್: ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎಂದು ಅಮೆರಿಕದಮೌಂಟ್ ಸಿನಾಯ್‌ನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ತಜ್ಞರು ಎಚ್ಚರಿಸಿದ್ದಾರೆ.

‘ಮೆದುಳಿನ ರಕ್ತನಾಳದಲ್ಲಿ ಕೊರೊನಾ ಸೋಂಕು ರಕ್ತ ಹೆಪ್ಪುಗಟ್ಟುವಂತೆ ಮಾಡುವ ಅಪಾಯ ಹೆಚ್ಚು. ಹೀಗಾಗಿ ಸೋಂಕಿತರು ನಿಯಮಿತವಾಗಿ ನರ ಸಂಬಂಧಿ ತಪಾಸಣೆಗೆ ಒಳಗಾಗುವುದು ಮುಖ್ಯ’ ಎಂದು ಸಂಸ್ಥೆಯ ತಜ್ಞರು ತಿಳಿಸಿದ್ದಾರೆ.

ಈ ಸಂಬಂಧ ಅಮೆರಿಕನ್ ಜರ್ನಲ್ ಆಫ್ ನ್ಯೂರೋಕಾರ್ಡಿಯಾಲಜಿಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದ್ದು, ನ್ಯೂಯಾರ್ಕ್‌ನ ಆರು ಪ್ರಮುಖ ಆಸ್ಪತ್ರೆಗಳಲ್ಲಿ ಮಾರ್ಚ್–ಏಪ್ರಿಲ್ ಅವಧಿಯಲ್ಲಿ ದಾಖಲಾಗಿರುವ ರೋಗಿಗಳನ್ನು ಪರಿಶೀಲಿಸಿದ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ.

‘ಸೋಂಕು ದೃಢಪಟ್ಟ ನಂತರ ನರಸಂಬಂಧಿ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಪಾರ್ಶ್ವವಾಯು ಸೇರಿದಂತೆ ಇತರ ತೊಂದರೆಗಳನ್ನು ತಡೆಗಟ್ಟಲು ಚಿಕಿತ್ಸೆ ಪ್ರಾರಂಭಿಸಲು ಅನುಕೂಲವಾಗುತ್ತದೆ. ಸಾವಿನ ಪ್ರಮಾಣವನ್ನೂ ಕಡಿಮೆ ಮಾಡಲು ಸಾಧ್ಯವಾಗಲಿದೆ'ಎಂದು ಸಂಸ್ಥೆ ಕೈಗೊಂಡ ಅಧ್ಯಯನ ತಂಡದಲ್ಲಿದ್ದ ಪುನೀತ್ ಬೇಲಾನಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.