ವಾಷಿಂಗ್ಟನ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಮ್ಮ ದೇಶವು ಭಾರತಕ್ಕೆ ವೆಂಟಿಲೇಟರ್ಗಳನ್ನು ದಾನ ನೀಡಲಿದೆಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಟ್ವೀಟ್ ಮಾಡಿದ್ದಾರೆ.

'ಈ ಜಾಗತಿಕ ಪಿಡುಗಿನ ಸಮಯದಲ್ಲಿ ನಾವು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಲ್ಲುತ್ತೇವೆ' ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಗೆ ಲಸಿಕೆ ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಅಮೆರಿಕ- ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.

'ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕವು ವೆಂಟಿಲೇಟರ್ಗಳನ್ನು ದಾನ ನೀಡಲಿದ್ದೇವೆ. ಈ ಬಗ್ಗೆನನಗೆ ಹೆಮ್ಮೆ ಇದೆ. ಜಾಗತಿಕ ಪಿಡುಗಿನ ಈ ಸಂದರ್ಭದಲ್ಲಿ ನಾವು, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಲ್ಲುತ್ತೇವೆ. ಲಸಿಕೆ ಅಭಿವೃದ್ಧಿಗೆ ನಾವು ಸಹಕರಿಸುತ್ತಿದ್ದೇವೆ. ನಾವು ಒಟ್ಟಾಗಿ ಅದೃಶ್ಯ ಶತ್ರುವನ್ನು ಸೋಲಿಸುತ್ತೇವೆ!' ಎಂದು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚೀನಾ ಪಿಂಚಣಿ ನಿಧಿಯಿಂದ ಶತಕೋಟಿ ಡಾಲರ್ ಹಣ ಹಿಂಪಡೆದ ಅಮೆರಿಕ

ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, 'ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಕೊರೊನಾ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಅಮೆರಿಕ ಹಾಗೂ ಭಾರತ ಸಹಕರಿಸಲಿವೆ. ತಮ್ಮ ದೇಶವು ಭಾರತಕ್ಕೆ ವೆಂಟಿಲೇಟರ್ಗಳನ್ನು ದಾನ ಮಾಡಲಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.