ಕಾಬೂಲ್: ‘ಪಾಕಿಸ್ತಾನಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ, ಚಿತ್ರಹಿಂಸೆ ನೀಡಲಾಗಿದೆ’ ಎಂದು ಅಫ್ಘನ್ ಸರ್ಕಾರ ಶನಿವಾರ ಆರೋಪಿಸಿದೆ.

‘ಇಸ್ಲಾಮಾಬಾದ್ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಅಫ್ಘಾನಿಸ್ತಾನದ ರಾಯಭಾರಿಯ ಮಗಳಾದ ಸಿಲ್ಸಿಲಾ ಅಲಿಖಿಲ್ ಅವರು ಬಾಡಿಗೆ ವಾಹನದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಅಪರಿಚಿತರಿಂದ ಕೆಲ ಗಂಟೆಗಳ ಕಾಲ ಅಪಹರಣಕ್ಕೊಳಗಾಗಿದ್ದಾರೆ. ನಂತರ ಸಿಲ್ಸಿಲಾ ಅವರಿಗೆ ತೀವ್ರತರನಾದ ಚಿತ್ರಹಿಂಸೆ ನೀಡಲಾಗಿದೆ’ ಎಂದು ಅಘ್ಘನ್ ಸರ್ಕಾರ ತಿಳಿಸಿದೆ. ಆದರೆ, ಅಪಹರಣದ ವಿವರಗಳನ್ನು ಹಂಚಿಕೊಂಡಿಲ್ಲ.

‘ಅಪಹರಣಕಾರರಿಂದ ಬಿಡುಗಡೆ ಹೊಂದಿದ ಬಳಿಕ ಸಿಲ್ಸಿಲಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಹಾಗೂ ಅಫ್ಘಾನಿಸ್ತಾನದ ರಾಯಭಾರಿ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದೂ ಅಘ್ಘನ್, ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

‘ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಯಭಾರಿ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಟ್ವೀಟ್ ಮಾಡಿದ್ದು, ಪಾಕಿಸ್ತಾನ ಸರ್ಕಾರವು ಈ ವಿಚಾರದ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 'ಪಾಕಿಸ್ತಾನದಲ್ಲಿನ ಅಫ್ಗಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ, ಹಿಂಸಿಸಿರುವುದು ಖಂಡನೀಯ..' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.