ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌-4 ವೀಸಾ ಕೆಲಸದ ಅನುಮತಿ ರದ್ದು ಬಗ್ಗೆ 3 ತಿಂಗಳೊಳಗೆ ತೀರ್ಮಾನ

Last Updated 22 ಸೆಪ್ಟೆಂಬರ್ 2018, 10:21 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎಚ್‌-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆಅಮೆರಿಕದಲ್ಲಿ ನೌಕರಿ ಮಾಡಲು ಅನುಮತಿ ನೀಡುವ ಎಚ್4 ವೀಸಾವನ್ನು ರದ್ದುಗೊಳಿಸುವ ನಿರ್ಧಾರ ಮೂರು ತಿಂಗಳೊಳಗೆ ಜಾರಿಗೆ ಬರಲಿದೆ ಎಂದು ಅಮೆರಿಕ ಸರ್ಕಾರ ನ್ಯಾಯಾಲಯದಲ್ಲಿ ಹೇಳಿದೆ.ಕೊಲಂಬಿಯಾ ಕೋರ್ಟ್ ನಲ್ಲಿ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (ಡಿಎಚ್‌ಎಸ್‌) ಈ ವಿಷಯವನ್ನು ಹೇಳಿದೆ, ಅಮೆರಿಕದ ಈ ನಿರ್ಧಾರದಿಂದಾಗಿ ಸಾವಿರಕ್ಕಿಂತಲೂ ಹೆಚ್ಚು ಭಾರತೀಯರಿಗೆ ಸಮಸ್ಯೆ ಎದುರಾಗಲಿದೆ.

2015ರಿಂದ ಎಚ್-1 ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಎಚ್-4 ವೀಸಾದಲ್ಲಿ ನೌಕರಿ ಮಾಡಲು ಅವಕಾಶ ನೀಡಲಾಗಿತ್ತು.ಇಲ್ಲಿಯವರೆಗೆ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಎಚ್ 4 ವೀಸಾ ಪಡೆದು ನೌಕರಿ ಮಾಡುತ್ತಿದ್ದಾರೆ. ಇದರಲ್ಲಿ ಶೇ.90 ಮಂದಿ ಭಾರತೀಯರು ಎಂದು ಅಮೆರಿಕದ ವರದಿಯೊಂದು ಹೇಳಿದೆ.ಇದರಲ್ಲಿ ಶೇ. 94 ಮಂದಿ ಮಹಿಳೆಯರಾಗಿದ್ದಾರೆ.

ಎಚ್ 4 ವೀಸಾ ರದ್ದು ಮಾಡುವ ತೀರ್ಮಾನವನ್ನು ಜೂನ್ ತಿಂಗಳಲ್ಲಿ ಪ್ರಕಟಿಸುವುದಾಗಿಯೂ ಈ ಬಗ್ಗೆ ಇರುವ ಅಧಿಕೃತ ಕ್ರಮಗಳು ಅದೇ ತಿಂಗಳು ಆರಂಭಿಸುವುದಾಗಿ ಅಮೆರಿಕ ಸರ್ಕಾರ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಆದರೆ ಜೂನ್ ತಿಂಗಳಿನಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.ಎಚ್ 4 ವೀಸಾ ಬಗ್ಗೆ ತೀರ್ಮಾನ ಕೈಗೊಳ್ಳುವ ಬಗ್ಗೆ ಟ್ರಂಪ್ ಸರ್ಕಾರ ಎರಡನೇ ಬಾರಿ ಈ ರೀತಿ ವಿಳಂಬ ಮಾಡಿದೆ.ಈ ಹಿಂದೆ ಫೆಬ್ರುವರಿ ತಿಂಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಫೆಡರಲ್ ಕೋರ್ಟ್ ಗೆ ಹೇಳಿದ್ದರೂ ಅದನ್ನು ನೆರವೇರಿಸಲಿಲ್ಲ.

ಎಚ್ 1 ಬಿ ವೀಸಾ ಹೊಂದಿರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವವರ ಸಂಗಾತಿಗಳಿಗೆ ಎಚ್ 4 ವೀಸಾದಲ್ಲಿ ನೌಕರಿ ಮಾಡಬಹುದು ಎಂಬ ನಿಯಮವನ್ನು ಒಬಾಮ ಸರ್ಕಾರ ಜಾರಿಗೆ ತಂದಿತ್ತು.ಈ ನಿಯಮವನ್ನು ರದ್ದು ಮಾಡುವುದಾಗಿ ಟ್ರಂಪ್ ಈ ಹಿಂದೆಯೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT