ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಹಸ್ತಾಂತರಿಸುವಂತೆಪಾಕಿಸ್ತಾನ ಮೂರನೇ ಬಾರಿ ಬ್ರಿಟನ್ಗೆ ಮನವಿ ಮಾಡಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಇಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅವರಿಗೆ ಈ ಕುರಿತ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಡಾನ್ ದೈನಿಕ ವರದಿ ಮಾಡಿದೆ.

‘ಷರೀಫ್ ಅವರು ಚಿಕಿತ್ಸೆ ಕಾರಣ ನೀಡಿ ಕಳೆದ ನವೆಂಬರ್ನಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ಅವರ ವೀಸಾ ರದ್ದು ಮಾಡಬೇಕು. ಬ್ರಿಟನ್ನ ವಲಸೆ ಕಾಯ್ದೆ 1974 ಅನ್ವಯ, ನಾಲ್ಕಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ವ್ಯಕ್ತಿಯನ್ನು ಆತನ/ಆಕೆಯ ದೇಶಕ್ಕೆ ಹಸ್ತಾಂತರಿಸಬೇಕು. ಇದನ್ನು ಪರಿಗಣಿಸಿ ಕೂಡಲೇ ಷರೀಫ್ ಅವರನ್ನು ಹಸ್ತಾಂತರಿಸಬೇಕು’ ಎಂದು ಮನವಿಪತ್ರದಲ್ಲಿ ಕೋರಲಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ವರಿಷ್ಠ, 70 ವರ್ಷದ ನವಾಜ್ ಷರೀಫ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ ಕೋರ್ಟ್ 2017ರಲ್ಲಿ ಘೋಷಿಸಿದ ನಂತರ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.