ಢಾಕಾ : ಇತ್ತೀಚೆಗೆ ಭಾರಿ ಹಿಂಸಾಚಾರ ನಡೆದ ಬಾಂಗ್ಲಾದೇಶದಲ್ಲಿ ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ದೇಶದಲ್ಲಿ ಮೆಟ್ರೊ, ಬಸ್, ಟ್ಯಾಕ್ಸಿಗಳಂತಹ ಸೇವೆಗಳು ಪುನರಾರಂಭಗೊಂಡಿವೆ. ದೇಶದಾದ್ಯಂತ ವ್ಯಾಪಾರ– ವಹಿವಾಟುಗಳು ಪುನಾರಂಭಗೊಳ್ಳುತ್ತಿವೆ. ರಾಜಧಾನಿ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲವಾದರೂ ನಿಧಾನವಾಗಿ ಸುಧಾರಿಸುತ್ತಿದೆ.