ವಾಷಿಂಗ್ಟನ್: ‘ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್‍ಯಾಲಿಗಳು ಜನರನ್ನು ವಿಭಜಿಸುವ, ಬಾಂಧವ್ಯಗಳಲ್ಲಿ ಬಿರುಕು ಮೂಡಿಸುವಂಥ ಮಾಹಿತಿ ಹರಡುವ ಘಟನೆಗಳಾಗಿವೆ'ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಆರೋಪಿಸಿದರು.

‘ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ಸೋಂಕಿನ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚುನಾವಣ ಹಣ ಖರ್ಚು ಮಾಡುತ್ತಿದ್ದಾರೆ‘ ಎಂದು ಫ್ಲಾರಿಡಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಬೈಡೆನ್ ಮಾತನಾಡಿದರು.

‘ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ. ಈಗಾಗಲೇ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ‘ ಎಂದು ಹೇಳಿದರು. ‘ವಾರದ ಹಿಂದೆ ಶ್ವೇತಭವನದ ಮುಖ್ಯಸ್ಥರೊಬ್ಬರು, ನಾವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಹೋಗುವುದಿಲ್ಲ‘ ಎಂದು ಹೇಳಿದ್ದರು‘ ಎಂದು ಶ್ವೇತಭವನದ ಮುಖ್ಯಸ್ಥ ಮಾರ್ಕ್‌ಮೆಡೋಸ್ ಅವರ ಇತ್ತೀಚೆಗಿನ ಸಂದರ್ಶನದ ಭಾಗವನ್ನು ಬೈಡೆನ್ ಉಲ್ಲೇಖಿಸಿದರು.

ಕೊರೊನಾ ವೈರಸ್ ಸೋಂಕು ಎನ್ನುವುದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ನಡುವಿನ ‘ವಾಕ್ಸಮರ‘ದ ವಿಷಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.