ವಾಷಿಂಗ್ಟನ್: ‘ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕುವುದಾಗಿ ಭಾರತ ಈಗ ಹೇಳುತ್ತಿದೆ. ಆದರೆ, ಈಗಾಗಲೇ ಸಮಯ ಮೀರಿಹೋಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ‘ಟ್ರುತ್’ನಲ್ಲಿ ಟ್ರಂಪ್ ಈ ಕುರಿತು ಪೋಸ್ಟ್ ಮಾಡಿದ್ದಾರೆ. ‘ಭಾರತವು ಅಮೆರಿಕಕ್ಕೆ ಅಪಾರ ಪ್ರಮಾಣದ ಸರಕುಗಳನ್ನು ರಫ್ತು ಮಾಡುತ್ತದೆ. ಆದರೆ, ನಾವು ಅವರಿಗೆ ಅತಿ ಕಡಿಮೆ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಿದ್ದೇವೆ. ಭಾರತ ನಮ್ಮ ವಸ್ತುಗಳ ಮೇಲೆ ವಿಧಿಸಿರುವ ಹೆಚ್ಚಿನ ಪ್ರಮಾಣದ ಸುಂಕವೇ ಇದಕ್ಕೆ ಕಾರಣವಾಗಿದೆ. ಹಲವು ದಶಕಗಳಿಂದಲೂ ಇದು ಹೀಗೆಯೇ ಇದೆ’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

‘ಭಾರತವು ಬಹುತೇಕ ತೈಲ, ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದಲೇ ಖರೀದಿಸುತ್ತಿದ್ದು, ಅಮೆರಿಕದಿಂದ ಅತ್ಯಲ್ಪ ಖರೀದಿ ಮಾಡುತ್ತಿದೆ. ಈ ವಿಚಾರವು ಕೆಲವೇ ಮಂದಿಗಷ್ಟೇ ತಿಳಿದಿದೆ. ಈಗ ಸಂಪೂರ್ಣ ಸುಂಕವನ್ನು ಕಡಿತಗೊಳಿಸುವ ವಿಚಾರವನ್ನು ಭಾರತ ಪ್ರಸ್ತಾಪಿಸುತ್ತಿದೆ. ಆದರೆ, ಸಮಯ ಮೀರಿ ಹೋಗಿದೆ. ಭಾರತ ಈ ವಿಚಾರವನ್ನು ಹಲವು ವರ್ಷಗಳ ಹಿಂದೆಯೇ ಯೋಚಿಸಬೇಕಿತ್ತು’ ಎಂದೂ ಟ್ರಂಪ್ ಹೇಳಿದ್ದಾರೆ.

ತಿಯಾನ್ಜಿನ್ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯ ಭಾಗವಾಗಿ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಶ್ರೀಮಂತರ ಪಾಲಾಗುತ್ತಿರುವ ಲಾಭ: ನವರೊ

ನ್ಯೂಯಾರ್ಕ್: ಭಾರತದ ಜನರಿಗೆ ಸಿಗಬೇಕಾದ ಹಣವು ಕೆಲವೇ ಕೆಲವು ಶ್ರೀಮಂತರ (ಬ್ರಾಹ್ಮಣರು) ಪಾಲಾಗುತ್ತಿದೆ. ಇದನ್ನು ನಿಲ್ಲಿಸಬೇಕು’ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಹೇಳಿದ್ದಾರೆ.

ಅಮೆರಿಕವು ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಿದರೂ, ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಬೆನ್ನಲ್ಲೇ ನವರೊ ಹೇಳಿಕೆ ಹೊರಬಿದ್ದಿದೆ.

‘ಫಾಕ್ಸ್ ನ್ಯೂಸ್’ಗೆ ನೀಡಿರುವ ಸಂದರ್ಶನದಲ್ಲಿ ನವರೊ, ‘ನೋಡಿ... ಮೋದಿ ದೊಡ್ಡ ನಾಯಕ. ಆದರೆ, ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವೊಂದರ ಪ್ರಧಾನಿಯಾದ ಅವರು, ಹೇಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಸಹಕರಿಸುತ್ತಾರೆ ಎನ್ನುವುದೇ ನನಗೆ ಅರ್ಥ ಆಗುತ್ತಿಲ್ಲ’ ಎಂದು ಹೇಳಿದ್ದಾರೆ.(ಪಿಟಿಐ): ಭಾರತದ ಜನರಿಗೆ ಸಿಗಬೇಕಾದ ಹಣವು ಕೆಲವೇ ಕೆಲವು ಶ್ರೀಮಂತರ (ಬ್ರಾಹ್ಮಣರು) ಪಾಲಾಗುತ್ತಿದೆ. ಇದನ್ನು ನಿಲ್ಲಿಸಬೇಕು’ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಹೇಳಿದ್ದಾರೆ.

‘ಫಾಕ್ಸ್ ನ್ಯೂಸ್’ಗೆ ನೀಡಿರುವ ಸಂದರ್ಶನದಲ್ಲಿ ನವರೊ, ‘ನೋಡಿ... ಮೋದಿ ದೊಡ್ಡ ನಾಯಕ. ಆದರೆ, ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವೊಂದರ ಪ್ರಧಾನಿಯಾದ ಅವರು, ಹೇಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಸಹಕರಿಸುತ್ತಾರೆ ಎನ್ನುವುದೇ ನನಗೆ ಅರ್ಥ ಆಗುತ್ತಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.