ಜಿನಿವಾ: ಕಾಂಗೋದಲ್ಲಿ 20 ಲಕ್ಷ ಜನರಿಗೆ ಎಬೋಲಾ ಸೋಂಕು ಕಾಣಿಸಿದ ಕಾರಣ ಅಂತರರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಹಿಂದೆ ಮೂರು ಬಾರಿ ಇಂತದೇ ಸ್ಥಿತಿ ನಿರ್ಮಾಣವಾದಾಗ ತುರ್ತುಸ್ಥಿತಿ ಘೋಷಿಸಬೇಕು ಎಂಬ ತಜ್ಞರ ಸಲಹೆಯನ್ನು ವಿಶ್ವಸಂಸ್ಥೆ ನಿರಾಕರಿಸಿತ್ತು. ದೀರ್ಘಕಾಲದಿಂದ ಇದೇ ಸ್ಥಿತಿ ಮುಂದುವರಿದ ಪರಿಣಾಮ ಈಗ ಘೋಷಣೆ ಮಾಡಲಾಗಿದೆ.
ಕಾಂಗೋದಲ್ಲಿ ಎರಡನೇ ಬಾರಿ ಕಾಣಿಸಿಕೊಂಡ ಎಬೋಲಾದಿಂದ ಕಳೆದ ಆಗಸ್ಟ್‌ನಿಂದ 1,600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಒಂದು ರೀತಿಯಲ್ಲಿ ಯುದ್ಧ ಪ್ರದೇಶದಲ್ಲಿ ಕಾಣಿಸಿಕೊಂಡ ಸ್ಥಿತಿಯಂತಾಗಿದೆ.