ಸ್ಕಾಕ್ಹೋಮ್: ಅಮೆರಿಕದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಕಾಲೇಜ್ ಡಿ ಫ್ರಾನ್ಸ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಫಿಲಿಪ್ ಅಘಿಯಾನ್ ಮತ್ತು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪೀಟರ್ ಹೊವಿಟ್ ಅವರು ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

‘ನಾವೀನ್ಯದೊಂದಿಗೆ ಆರ್ಥಿಕ ಬೆಳವಣಿಗೆ’ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ಸೋಮವಾರ ತಿಳಿಸಿದೆ.

ಈವರೆಗೆ 96 ಮಂದಿಗೆ 56 ಬಾರಿ ಅರ್ಥಶಾಸ್ತ್ರದ ನೊಬೆಲ್ ನೀಡಲಾಗಿದೆ. ಈ ಪೈಕಿ ಮೂವರು ಮಾತ್ರ ಮಹಿಳೆಯರು. ಈ ಪ್ರಶಸ್ತಿಯನ್ನು ಡಿಸೆಂಬರ್ 10ರಂದು ಪ್ರದಾನ ಮಾಡಲಾಗುತ್ತದೆ.

ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ, ರಾಸಾಯನ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರದ ನೊಬೆಲ್ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.