ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ ಟಾಕ್‌ ಸ್ಟಾರ್‌ಗೆ 10 ವರ್ಷ ಜೈಲು ಶಿಕ್ಷೆ: ಅಷ್ಟಕ್ಕೂ ಮಾಡಿರುವ ಅಪರಾಧ ಏನು?

ಹನೀನ್ ಹೋಸಮ್ ಅವರಿಗೆ 10 ವರ್ಷ ಜೈಲು ಶಿಕ್ಷೆ
Last Updated 23 ಜೂನ್ 2021, 10:57 IST
ಅಕ್ಷರ ಗಾತ್ರ

ಕೈರೊ: ಮಾನವ ಕಳ್ಳಸಾಗಣೆ ಆರೋಪದ ವಿಚಾರಣೆ ಕುರಿತು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಿದ್ದಕ್ಕೆ ಈಜಿಪ್ಟ್‌ನ ಟಿಕ್‌ಟಾಕ್ ಸ್ಟಾರ್ ಹನೀನ್ ಹೋಸಮ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೈರೊ ನ್ಯಾಯಾಲಯ ಆದೇಶ ಮಾಡಿದೆ.

ಸದ್ಯ ಪೊಲೀಸರು 19 ವರ್ಷದ ಹನೀನ್ ಅವರನ್ನು ಬಂಧಿಸಿದ್ದಾರೆ.

ಅಲ್ಲದೇ, ಕುಟುಂಬದ ಮೌಲ್ಯಗಳನ್ನು ಹಾಳುಗೆಡವಿದ್ದಕ್ಕಾಗಿ ಹಾಗೂ ಹದಿಹರೆಯದವರಿಗೆ ಲೈಂಗಿಕ ಚಟುವಟಿಕೆಗೆ ಉತ್ತೇಜಿಸಿರುವ ಪ್ರಕರಣದಡಿ ಇನ್ನೊಬ್ಬ ಯುವತಿ ಯೂಟ್ಯೂಬರ್ ಆದ ಮೌದಾ ಅಲ್ ಅದಮ್ ಹಾಗೂ ಇತರ ನಾಲ್ವರಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

‘ಹನೀನ್ ಹೋಸಮ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದಿದ್ದಕ್ಕೆ ದೀರ್ಘ ಶಿಕ್ಷೆಗೆ ಗುರಿಪಡಿಸಲಾಗಿದೆ‘ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಅಳುತ್ತಾ ವಿಡಿಯೋ ಮಾಡಿ ಹರಿಬಿಟ್ಟಿರುವ ಹನಿಮ್ ಹೋಸಮ್, ‘ಇಷ್ಟು ಕಠಿಣ ಶಿಕ್ಷೆ ನೀಡಲು ನಾನು ಯಾವುದೇ ತಪ್ಪು ಮಾಡಿಲ್ಲ. ಪ್ರಕರಣದಲ್ಲಿ ಅದಾಗಲೇ 10 ತಿಂಗಳು ಜೈಲುವಾಸ ಮಾಡಿ ಬಂದಿದ್ದೇನೆ. ಆ ನಂತರ ನಾನು ಯಾವುದೇ ಹೇಳಿಕೆ ನೀಡಿಲ್ಲ. ದಯವಿಟ್ಟು ನನಗೆ ಶಿಕ್ಷೆ ನೀಡಬೇಡಿ‘ ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ಟಿಕ್‌ಟಾಕ್ ವಿಡಿಯೋದಲ್ಲಿ ಹನಿಮ್ ಹೋಸಮ್, ‘ಹುಡುಗಿಯರು ಹಣಕ್ಕಾಗಿ ಮುಕ್ತವಾಗಿ ಕೆಲಸ ಮಾಡಬಹುದು‘ ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಪ್ರಕರಣ ಅವರ ಮೇಲೆ ದಾಖಲಾಗಿತ್ತು.

ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರವಾದ ಈಜಿಪ್ಟ್‌ನಲ್ಲಿ, ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಹೆಚ್ಚಿನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಅನೇಕ ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ 5000 ಕ್ಕೂ ಅಧಿಕ ಬೆಂಬಲಿಗರನ್ನು ಹೊಂದಿರುವವರನ್ನು ಮೇಲ್ವಿಚಾರಣೆ ಮಾಡಲು ಈಜಿಪ್ತ್ ಸರ್ಕಾರ ಕಾನೂನು ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT