ಕ್ವಾಲಾಲಂಪುರ: ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿ ತುರ್ತುಪರಿಸ್ಥಿತಿ ಘೋಷಣೆಗೆ ಅಲ್ಲಿನ ರಾಜಅಂಗೀಕಾರ ನೀಡಿದ್ದು, ಆಗಸ್ಟ್‌ವರೆಗೆ ಸಂಸತ್ ಅನ್ನು ಅಮಾನತಿನಲ್ಲಿಡಲಾಗುತ್ತಿದೆ.

ತುರ್ತುಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಈಗ ನಡೆಯಬೇಕಾಗಿದ್ದ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗುತ್ತಿದೆ.

ತುರ್ತುಪರಿಸ್ಥಿತಿ ಘೋಷಣೆ ಅಂಗೀಕಾರವಾದ ನಂತರ ದೂರದರ್ಶನದ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ ಮೊಹಿದ್ದೀನ್, ‘ಈಗ ಘೋಷಿಸಿರುವ ತುರ್ತು ಪರಿಸ್ಥಿತಿ ಯಾವುದೇ ಸೇನಾ ದಂಗೆಯಲ್ಲ. ಈಗ ದೇಶದಲ್ಲಿ ಕರ್ಫ್ಯೂ ವಿಧಿಸುವುದಿಲ್ಲ‘ ಎಂದು ಮಲೇಷ್ಯಾ ನಾಗರಿಕರಿಗೆ ಭರವಸೆ ನೀಡಿದರು. ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸರ್ಕಾರ ಉಸ್ತುವಾರಿಯಾಗಿ ದೇಶವನ್ನು ಮುನ್ನಡೆಸಲಿದೆ‘ ಎಂದು ತಿಳಿಸಿದರು.

ಕ್ವಾಲಾಲಂಪುರದ ಆಡಳಿತಾತ್ಮಕ ರಾಜಧಾನಿ ಪುತ್ರಜಯ ಸೇರಿದಂತೆ ಐದು ರಾಜ್ಯಗಳಲ್ಲಿ ಲಾಕ್‌ಡೌನ್ ತೆರವುಗೊಳಿಸುವ ಒಂದು ದಿನದ ಮೊದಲು ಮಲೇಷ್ಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.