ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

Published 25 ಏಪ್ರಿಲ್ 2024, 14:04 IST
Last Updated 25 ಏಪ್ರಿಲ್ 2024, 14:04 IST
ಅಕ್ಷರ ಗಾತ್ರ

ಕರಾಚಿ: ಗೆಳತಿಗಾಗಿ ತರಿಸಿದ್ದ ಬರ್ಗರ್‌ ತಿಂದ ಎಂದು ಯುವಕನೊಬ್ಬ ಸ್ನೇಹಿತನ ಕೊಂದ ವಿಚಿತ್ರ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. 

ಇಲ್ಲಿನ ಐಷಾರಾಮಿ ರಕ್ಷಣಾ ವಸತಿ ಪ್ರಾಧಿಕಾರದ (ಡಿಎಚ್ಎ) ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರುವರಿ 8ರಂದು ಈ ಘಟನೆ ನಡೆದಿದೆ.

ನಿವೃತ್ತ ಪೊಲೀಸ್ ಅಧಿಕಾರಿ ನಜೀರ್ ಅಹ್ಮದ್ ಮಿರ್‌ಬಹರ್ ಪುತ್ರ ಡೇನಿಯಲ್‌, ಗೆಳೆಯನಾದ ಅಲಿ ಕೆರಿಯೊನನ್ನು (ಸ್ಥಳೀಯ ಸೆಷನ್ಸ್ ನ್ಯಾಯಾಧೀಶರ ಮಗ) ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾನೆ. ಹಾಗೇ ಡೇನಿಯಲ್‌ ಗೆಳತಿ ಶಾಜಿಯಾ ಕೂಡ ಅಲ್ಲಿಗೆ ಬಂದಿದ್ದಾಳೆ. ಈ ವೇಳೆ ಡೇನಿಯಲ್‌ ಎರಡು ಬರ್ಗರ್‌ ಆರ್ಡರ್‌ ಮಾಡಿ ತರಿಸಿದ್ದಾನೆ.

ಅಲಿ ಕೆರಿಯೊ, ತನ್ನ ಗೆಳತಿಗಾಗಿ ತರಿಸಿದ್ದ ಬರ್ಗರ್‌ ತಿಂದಿದ್ದಾನೆ ಎಂದು ಡೇನಿಯಲ್‌ ಜಗಳ ಮಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಡೇನಿಯಲ್‌ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯ ಬಂದೂಕು ಕಿತ್ತುಕೊಂಡು ಅಲಿ ಕೆರಿಯೊ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಲಿ ಕೆರಿಯೊನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ. 

ನನ್ನ ಅನುಮತಿ ಇಲ್ಲದೇ ನೀನು ಬರ್ಗರ್‌ ಹೇಗೆ ತಿಂದೇ? ಎಂದು ಡೇನಿಯಲ್‌ ಜಗಳ ತೆಗೆದಿದ್ದ ಎಂಬುದು ತನಿಖೆಯಿಂದ ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ಹತ್ಯೆ ಮಾಡಿದ ಆರೋಪಿ ಡೇನಿಯಲ್‌ ಜೈಲಿನಲ್ಲಿದ್ದಾನೆ ಎಂದು ಪಾಕಿಸ್ತಾನದ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT