ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ ಯೆಮೆನ್ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ.

‘ನಿಮಿಷಾ ಪ್ರಿಯಾ ಅವರಿಗೆ ಯೆಮೆನ್ನಲ್ಲಿ ವಿಧಿಸಲಾಗಿರುವ ಶಿಕ್ಷೆ ಕುರಿತು ಮಾಹಿತಿ ಇದೆ. ಅವರ ಬಿಡುಗಡೆಗೆ ಸಾಧ್ಯವಿರುವ ಆಯ್ಕೆಗಳ ಬಗ್ಗೆ ನಿಮಿಷಾ ಅವರ ಕುಟುಂಬ ಸಹ ಯೋಚಿಸುತ್ತಿದೆ’ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ ಅವರು ಯೆಮೆನ್ ಪ್ರಜೆಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಯೆಮೆನ್ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷಾ ಪ್ರಿಯಾ ಅವರಿಗೆ ಮರಣ ದಂಡನೆ ವಿಧಿಸಿ ಆದೇಶಿಸಿತ್ತು. ಯೆಮೆನ್ ಸುಪ್ರೀಂ ನ್ಯಾಯಿಕ ಪರಿಷತ್ತು ಈ ಶಿಕ್ಷೆ ಎತ್ತಿ ಹಿಡಿದು 2023ರ ನವೆಂಬರ್ನಲ್ಲಿ ತೀರ್ಪು ನೀಡಿತ್ತು.

ನೆರವಿಗೆ ಮೊರೆ (ತಿರುವನಂತಪುರ ವರದಿ): ಪಾಲಕ್ಕಾಡ್ ನಿವಾಸಿ, ನಿಮಿಷಾ ಅವರ ತಾಯಿ ಪ್ರಿಯಾ ಕುಮಾರಿ ಅವರು ತಮ್ಮ ಮಗಳನ್ನು ಶಿಕ್ಷೆಯಿಂದ ಪಾರು ಮಾಡಲು ಅಗತ್ಯ ನೆರವನ್ನು ಸಂಬಂಧಪಟ್ಟವರು ನೀಡಬೇಕು ಎಂದು ಮಾಧ್ಯಮದ ಮೂಲಕ ಮೊರೆಯಿಟ್ಟಿದ್ದಾರೆ.
.ಕೇರಳ | ಗ್ಯಾಲರಿಯಿಂದ ಕೆಳಗೆ ಬಿದ್ದ ಶಾಸಕಿಯ ಆರೋಗ್ಯದಲ್ಲಿ ಅಲ್ಪ ಚೇತರಿಕೆ.ಕೇರಳ ಮಿನಿ ಪಾಕಿಸ್ತಾನ; ಹೀಗಾಗಿ ರಾಹುಲ್, ಪ್ರಿಯಾಂಕಾ ಗೆದ್ದರು: BJP ನಾಯಕ ರಾಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.