ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಆಕಾಂಕ್ಷಿ ಮಹಿಳೆಗೆ ಲೈಂಗಿಕತೆಯ ಪ್ರಶ್ನೆ ಕೇಳಿದ ಬಿಲ್ ಗೇಟ್ಸ್ ಕಚೇರಿ: ವರದಿ

Published 30 ಜೂನ್ 2023, 10:43 IST
Last Updated 30 ಜೂನ್ 2023, 10:43 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಖಾಸಗಿ ಕಚೇರಿಯಲ್ಲಿ ಕೆಲಸ ಕೇಳಿಕೊಂಡು ಬಂದ ಮಹಿಳೆ ಬಳಿ ಅಸಂಬದ್ಧ ಲೈಂಗಿಕ ಇತಿಹಾಸ , ಬೆತ್ತಲೆ ಚಿತ್ರಗಳು ಮತ್ತು ಪೋರ್ನ್ ಸಂಬಂಧಿತ ಪ್ರಶ್ನೆಗೆಳನ್ನು ಕೇಳಲಾಗಿದೆ ಎಂದು ವರದಿ ತಿಳಿಸಿದೆ.

ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಉದ್ಯೋಗ ಆಕಾಂಕ್ಷಿ ಮಹಿಳಾಯೊಬ್ಬರು ಬಿಲ್ ಗೇಟ್ಸ್ ಕಚೇರಿಯ ಗುತ್ತಿಗೆ ಸಂಸ್ಥೆ ಕಾನ್ಸೆಂಟ್ರಿಕ್ ಅಡ್ವೈಸರ್ಸ್ ವಿರುದ್ಧ ಅಸಂಬದ್ಧ ಪರಿಶೀಲನೆ ಪ್ರಕ್ರಿಯೆಯ ಆರೋಪ ಮಾಡಿದ್ದಾರೆ. ಇದು ಅಶ್ಲೀಲತೆ ಮತ್ತು ಲೈಂಗಿಕ ಇತಿಹಾಸಗಳ ಬಗ್ಗೆ ಪ್ರಶ್ನೆಗಳನ್ನು ಒಳಗೊಂಡಿತ್ತು ಎಂದೂ ಅವರು ದೂರಿದ್ದಾರೆ.

ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ಮುನ್ನ ನಡೆಯುವ ಪರಿಶೀಲನಾ ಪ್ರಕ್ರಿಯೆಯಲ್ಲಿ ಈ ಹಿಂದೆ ನೀವು ವಿವಾಹೇತರ ಸಂಬಂಧ ಹೊಂದಿದ್ದೀರಾ? ನಿಮ್ಮ ಮೊಬೈಲ್ ಫೋನ್‌ನಲ್ಲಿ ನಗ್ನ ಚಿತ್ರಗಳನ್ನು ಇಟ್ಟುಕೊಂಡಿದ್ದೀರಾ? ಯಾವ ರೀತಿಯ ಪೋರ್ನ್ ವಿಡಿಯೊಗಳನ್ನು ನೋಡಲು ಇಚ್ಛಿಸುತ್ತೀರಿ? ಈ ಹಿಂದೆ ಮಾದಕ ವ್ಯಸನಿಯಾಗಿದ್ದರೇ ಎಂಬಿತ್ಯಾದಿ ತೀರಾ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು ಎಂದು ಅವರು ಹೇಳಿದ್ದಾರೆ.

ಈ ರೀತಿಯ ಪ್ರಶ್ನೆಗಳನ್ನು ಕೇಳಿರುವ ವಿಷಯ ಬಿಲ್ ಗೇಟ್ಸ್ ಗಮನಕ್ಕೆ ಬಂದಿದೆಯೇ? ಎಂಬ ಬಗ್ಗೆ ವರದಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಗೇಟ್ಸ್ ವೆಂಚರ್ಸ್‌ನ ವಕ್ತಾರರು, ‘ಈ ಪ್ರಶ್ನೆಗಳು ಸ್ವೀಕಾರಾರ್ಹವಲ್ಲ. ಈ ಮೂಲಕ ಗುತ್ತಿಗೆದಾರ ಕಂಪನಿಯು ಒಪ್ಪಂದದ ಉಲ್ಲಂಘನೆ ಮಾಡಿದೆ’ಎಂದು ಹೇಳಿದ್ದಾರೆ.

ಅತ್ಯಂತ ಗೌರವಪೂರ್ವಕವಾಗಿ ಉದ್ಯೋಗಿಗಳ ನೇಮಕ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಸೇವೆ ಒದಗಿಸುವ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರಿಗೂ ನಿಯಮ ಪಾಲನೆ ಕಡ್ಡಾಯ ಎಂದೂ ಅವರು ತಿಳಿಸಿದ್ದಾರೆ.

ಆದರೆ, ಕಾನ್ಸೆಂಟ್ರಿಕ್ ಅಡ್ವೈಸರ್ಸ್ ಕಂಪನಿಯ ವಕ್ತಾರರು ಮಾತ್ರ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT