ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್: ಕಾಳಗ– ಗಗನಚುಂಬಿ ಕಟ್ಟಡದಲ್ಲಿ ಬೆಂಕಿ

Published 17 ಸೆಪ್ಟೆಂಬರ್ 2023, 14:06 IST
Last Updated 17 ಸೆಪ್ಟೆಂಬರ್ 2023, 14:06 IST
ಅಕ್ಷರ ಗಾತ್ರ

ಕೈರೊ: ಸುಡಾನ್ ಸೇನೆ ಮತ್ತು ಬಂಡಾಯವೆದ್ದಿರುವ ಅರೆಸೇನಾ ಪಡೆಗಳ ನಡುವಿನ ಕಾಳಗದಿಂದಾಗಿ ರಾಜಧಾನಿ ಕೈರೊ ನಗರದಲ್ಲಿರುವ 18 ಅಂತಸ್ತಿನ ಕಟ್ಟಡದಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. 

ಭಾನುವಾರ ಬೆಳ್ಳಂಬೆಳಗ್ಗೆ ಸುಡಾನ್ ಸೇನೆ ಮತ್ತು ‘ರ‍್ಯಾಪಿಡ್ ಸಪೋರ್ಟ್‌ ಫೋರ್ಸ್‌ಸ್‌‘  ನಡುವಿನ ಕಾಳಗದಿಂದ ಖಾರ್ಟೊಮ್ ಕೇಂದ್ರದಲ್ಲಿದ್ದ ಗ್ರೇಟರ್ ನೈಲ್ ಪೆಟ್ರೋಲಿಯಂ ತೈಲ ಕಂಪನಿಯ ಬೃಹತ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸುಡಾನ್ ಮಾಧ್ಯಮ ವರದಿ ಮಾಡಿದೆ. 

ಈ ಬೃಹತ್ ಕಟ್ಟಡದಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಮತ್ತು ಈ ಘಟನೆಯಲ್ಲಿ ಸಾವು-ನೋವುಗಳು ಆಗಿವೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅತಿ ಎತ್ತರದ ಈ ಕಟ್ಟಡದಿಂದ ದಟ್ಟವಾದ ಹೊಗೆ ಮಾತ್ರ ಆಕಾಶದ ಎತ್ತರಕ್ಕೆ ಚಿಮ್ಮುತ್ತಿರುವ ಚಿತ್ರಗಳು ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ವಿಶ್ವಸಂಸ್ಥೆಯ ವರದಿ ಪ್ರಕಾರ, ಸುಡಾನ್‌ನಲ್ಲಿನ ಆಂತರಿಕ ಯುದ್ಧದಿಂದಾಗಿ ಆಗಸ್ಟ್ ತಿಂಗಳವರೆಗೆ 4 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT