ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಕ್ಸುರಿ ಚಂಡಮಾರುತ ಅಬ್ಬರ: ಭಾರಿ ಮಳೆಯಿಂದ ಚೀನಾ ರಾಜಧಾನಿ ಬೀಜಿಂಗ್‌ ಜನ ಕಂಗಾಲು!

Published 30 ಜುಲೈ 2023, 10:50 IST
Last Updated 30 ಜುಲೈ 2023, 10:50 IST
ಅಕ್ಷರ ಗಾತ್ರ

ಬೀಜಿಂಗ್‌: ದೊಕ್ಸುರಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಉತ್ತರ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೀಜಿಂಗ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 

ಶುಕ್ರವಾರ ಚೀನಾಕ್ಕೆ ಅಪ್ಪಳಿಸಿದ ಚಂಡಮಾರುತದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವೆಡೆ ಭೂಕುಸಿತ ಕೂಡ ಸಂಭವಿಸಿದೆ.  

ಅಪಾಯದ ಅಂಚಿನಲ್ಲಿದ್ದ 27 ಸಾವಿರಕ್ಕೂ ಹೆಚ್ಚು ಬೀಜಿಂಗ್‌ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, 20 ಸಾವಿರದಷ್ಟು ಜನ ಮನೆ ತೊರೆದು ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಗ್ರಂಥಾಲಯ, ವಸ್ತುಸಂಗ್ರಹಾಲಯ ಸೇರಿ ರಾಜಧಾನಿಯಾದ್ಯಂತ ಕೆಲವು ಪ್ರದೇಶಗಳನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಅಲ್ಲದೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಜನತೆಗೆ ಸರ್ಕಾರ ಸೂಚನೆ ನೀಡಿದೆ. 

ಚಂಡಮಾರುತವು ಗಂಟೆಗೆ 175 ಕಿಮೀ ವೇಗದಲ್ಲಿ ಚೀನಾಕ್ಕೆ ಅಪ್ಪಳಿಸಿದ ಕಾರಣ ಹಲವು ಹಾನಿಗೆ ಕಾರಣವಾಯಿತು. 8 ಲಕ್ಷಕ್ಕೂ ಹೆಚ್ಚು ಜನ ಚಂಡಮಾರುತದಿಂದ ಹಾನಿ ಅನುಭವಿಸಿದ್ದಾರೆ ಎಂದು ಸ್ಟೇಟ್‌ ಮೀಡಿಯಾ ಭಾನುವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT