ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಷ್ಟು ದಿನದ ರಾಜಕೀಯ ಒತ್ತಡಗಳನ್ನು ಸ್ವಲ್ಪ ಬದಿಗೆ ಸರಿಸಿ ಇನ್ಮುಂದೆ ಪತ್ರಿಕೆಗಾಗಿ ಕೆಲಸ ಮಾಡಲಿದ್ದಾರೆ.

ಹೌದು, ರಿಷಿ ಸುನಕ್ ಅವರು ಅಂಕಣಕಾರರಾಗಿ ಬದಲಾಗಿದ್ದಾರೆ. ಬ್ರಿಟನ್ನ ಪ್ರತಿಷ್ಟಿತ ;ದಿ ಸಂಡೇ ಟೈಮ್ಸ್‘ ಪತ್ರಿಕೆಗೆ ಅವರು ಅಂಕಣಗಳನ್ನು ಬರೆಯಲಿದ್ದಾರೆ.

ಆಡಳಿತಾರೂಡ ಲೇಬರ್ ಪಕ್ಷದ ಪ್ರಧಾನಿ ಕಿರ್ ಸ್ಟಾರ್ಮರ್ ಸಂಪುಟದ ಹಣಕಾಸು ಸಚಿವರು ಶೀಘ್ರ ಬಜೆಟ್ ಮಂಡಿಸಲಿದ್ದು, ಈ ನಿಟ್ಟಿನಲ್ಲಿ ರಿಷಿ ಅವರ ಅಂಕಣಗಳು ಪ್ರಾಮುಖ್ಯತೆ ಪಡೆದುಕೊಳ್ಳಲಿವೆ ಎನ್ನಲಾಗಿದೆ.

ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಸುಧಾರಣೆಗಳನ್ನು ಜನ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸು ಸಚಿವರು ತೆರಿಗೆ ಸುಧಾರಣೆ ಹೆಸರಿನಲ್ಲಿ ಹೆಚ್ಚಿನ ತೆರಿಗೆಯನ್ನು ಜನರ ಮೇಲೆ ಹೇರಬಾರದು ಎಂದು ರಿಷಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸದ್ಯ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿರುವ ರಿಷಿ ಅವರು ಅಂಕಣಗಳಿಂದ ಬರುವ ಸಂಭಾವನೆಯನ್ನು ದೇಶದಲ್ಲಿ ಸಂಖ್ಯಾಶಾಸ್ತ್ರ ಸಂಶೋಧನೆಗೆ ತೆರದಿರುವ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದಿದ್ದಾರೆ.

ತಾವು ದೇಶದ ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ ಬರುತ್ತೇನೆ. ಹೋರಾಟ ನಿರಂತರ, ನಾನು ಇನ್ನೂ ಬದುಕಿದ್ದೇನೆ, ನನ್ನ ಪಕ್ಷವೂ ಸಹ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಐದು ವರ್ಷ ನಿರಂತರವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ಕೊಡಲು ಆಗಿರಲಿಲ್ಲ. ಸದ್ಯ ಹೆಂಡತಿ ಮಕ್ಕಳ ಜೊತೆ ಒಳ್ಳೆಯ ಸಮಯ ಕಳೆಯುತ್ತಿದ್ದೇನೆ. ಈಗ ಅಂಕಣ ಬರೆಯಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.