ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಗಾಲ್ಫ್‌ ಬಾಲ್‌ ಕದ್ದು ಓಡಿದ ನರಿ

Last Updated 24 ಆಗಸ್ಟ್ 2018, 9:48 IST
ಅಕ್ಷರ ಗಾತ್ರ

ಮೆಸ್ಸಾಚುಸೆಟ್ಸ್: ಇಲ್ಲಿನ ಸ್ಪ್ರಿಂಗ್‌ಫಿಲ್ಡ್ ಗಾಲ್ಫ್‌ ಕೋರ್ಟ್‌ಗೆ ಪಂದ್ಯ ವೀಕ್ಷಿಸಲು ಬಂದಿದ್ದ ಎರಡು ನರಿಗಳ ಪೈಕಿ ಒಂದು, ಗಾಲ್ಪ್‌ ಬಾಲ್‌ ಅನ್ನು ’ಕದ್ದು’ ಪರಾರಿಯಾಗಿರುವ ಘಟನೆ ನಡೆದಿದೆ.ಈ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿಲ್ಲ!

ಪಂದ್ಯ ನೋಡುತ್ತಿದ್ದ ನರಿಯೊಂದು ಗುರಿಯ ಕಡೆಗೆ ಬಾಲ್‌ ಬರುತ್ತಿದ್ದಂತೆ ಅದನ್ನು ಕಚ್ಚಿಕೊಂಡು ಓಡಿ ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ವಿಡಿಯೊವನ್ನು ಸ್ಪ್ರಿಂಗ್‌ಫಿಲ್ಡ್ ಕಂಟ್ರಿ ಕ್ಲಬ್‌ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಗಾಲ್ಫ್‌ ಆಟಗಾರಹ್ಯಾಂಕ್‌ ಡೌನಿ ಮತ್ತು ಸ್ನೇಹಿತರುಗಾಲ್ಪ್‌ ಆಡುತ್ತಿರುವಾಗ ಈ ಘಟನೆ ನಡೆದಿದೆ.

ವಿಡಿಯೊದಲ್ಲಿ ಏನಿದೆ?
ಎರಡು ನರಿಗಳು ಗಾಲ್ಪ್‌ ಕೋರ್ಟ್‌ಗೆ ಬಂದು ಪಂದ್ಯವನ್ನು ನೋಡುತ್ತಿದ್ದವು. ಹ್ಯಾಂಕ್‌ ಡೌನಿ ಬಾಲ್‌ ಅನ್ನು ಗುರಿಯ ಕಡೆಗೆ ಹೊಡೆದರು. ಆ ಬಾಲ್‌ ನರಿಯೊಂದರ ಸಮೀಪದಲ್ಲೇ ಬಂದು ಬಿದ್ದಿತು. ಇದನ್ನು ಗಮನಿಸಿದ ಆ ನರಿ ಬಾಲ್‌ ಅನ್ನು ಕಚ್ಚಿಕೊಂಡು ಗಾಲ್ಪ್‌ ಕೋರ್ಟ್‌ಗೆ ಹೊಂದಿಕೊಂಡಿರುವ ಕಾಡಿನೊಳಗೆ ಓಡಿತು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT