ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

303 ಭಾರತೀಯರಿದ್ದ ವಿಮಾನ ಮಾರ್ಗ ಮಧ್ಯೆ ಭೂಸ್ಪರ್ಶ: ಮಾನವ ಕಳ್ಳಸಾಗಣೆ ಶಂಕೆ

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವಾಟ್ರಿ, ಫ್ರಾನ್ಸ್‌: ನಿಕರಾಗುವಾಗೆ ತೆರಳುತ್ತಿದ್ದ ವಿಮಾನ ಇಲ್ಲಿ ಶುಕ್ರವಾರ ಮಾನವ ಕಳ್ಳಸಾಗಾಣೆ ಶಂಕೆ ಮೇರೆಗೆ ತುರ್ತು ಭೂಸ್ಪರ್ಶ ಮಾಡಿದೆ.

ಈ ವಿಮಾನದಲ್ಲಿ ಸುಮಾರು 300 ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು.

ಈ ವಿಮಾನವು ಯುಎಇಯಿಂದ ಹೊರಟಿತ್ತು. ರೊಮಾನಿಯಾದ ಕಂಪನಿ ಲೆಜೆಂಡ್‌ ಏರ್‌ಲೈನ್ಸ್‌ಗೆ ಸೇರಿದ ಎ340 ವಿಮಾನವನ್ನು ಖಚಿತ ಮಾಹಿತಿ ಆಧರಿಸಿ ವಾಟ್ರಿ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. 

ವಿಮಾನದಲ್ಲಿ ಇದ್ದವರು ಮಾನವ ಕಳ್ಳಸಾಗಣೆಗೆ ಒಳಗಾಗಿರುವ ಶಂಕೆ ಇದೆ ಎಂದು ಪ್ಯಾರಿಸ್‌ನ ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸಂಘಟಿತ ಅಪರಾಧ ನಿಗ್ರಹ ಘಟಕ ಜುನಾಲ್ಕೊ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ. 

’ವಿಮಾನದಲ್ಲಿ 303 ಮಂದಿ ಭಾರತೀಯ ಪ್ರಜೆಗಳಿದ್ದಾರೆ. ಬಹುಶಃ ಇವರು ಯುಎಇಯಲ್ಲಿ ಕೆಲಸ ಮಾಡುತ್ತಿದ್ದಿರಬೇಕು. ಇವರನ್ನು ಅಮೆರಿಕ ಅಥವಾ ಕೆನಡಾಗೆ ಅಕ್ರಮವಾಗಿ ಪ್ರವೇಶಿಸುವ ಯತ್ನವಾಗಿ ತೆರಳುತ್ತಿದ್ದರು ಎಂದು ಶಂಕಿಸಲಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT